ದಾವಣಗೆರೆ, ಫೆ.4- ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕಳೆದ ವಾರ ನಡೆದ ಸಮಾರಂಭದಲ್ಲಿ ನಗರದ ಅಂತರರಾಷ್ಟ್ರೀಯ ಯೋಗ ಸಾಧಕ ಎನ್.ಪರಶುರಾಮ್ ಅವರಿಗೆ `ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಚಲನಚಿತ್ರ ಗೀತೆ ರಚನೆಗಾರ ಪದ್ಮಶ್ರೀ ಡಾ. ದೊಡ್ಡರಂಗೇಗೌಡರು, ಹಿರಿಯ ಚಲನಚಿತ್ರ ಕಲಾವಿದ ಗಣೇಶ್ ರಾವ್ ಕೇಸರ್‌ಕರ್, ಡಾ. ಶೇಖರಗೌಡ ಮಾಲಿ ಪಾಟೀಲ್, ಡಾ. ಚಿಕ್ಕಹೆಜ್ಜಾಜಿ ಮಹಾದೇವ್, ಪಂಕಜ ರವಿಶಂಕರ್, ಕಾಂತರಾಜಪುರ ಸುರೇಶ್, ಹಿರಿಯ ಚಿತ್ರ ನಟಿ ಗಿರಿಜಾ ಲೋಕೇಶ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪರಶುರಾಮ್ ಅವರನ್ನು ಎಸ್‌ಎಎಸ್‌ಎಸ್ ಯೋಗ ಫೆಡರೇಶನ್ ಅಧ್ಯಕ್ಷ ರುದ್ರಣ್ಣ, ಉಪಾಧ್ಯಕ್ಷ ಎಂ.ಎನ್.ಗೋಪಾಲರಾವ್, ಖಜಾಂಚಿ ಎಸ್. ರಾಜಶೇಖರ್, ನಿರ್ದೇಶಕರಾದ ಅಜಯ್, ಜೆ.ಎಸ್. ವೀರೇಶ್, ಎಂ.ವೈ. ಸತೀಶ್, ರಾಘವೇಂದ್ರ ಎನ್.ಚವ್ಹಾಣ್, ಜಿ.ನಾಗರಾಜ್, ಸಾವಿತ್ರಮ್ಮ ಮತ್ತಿತರರು ಅಭಿನಂದಿಸಿದ್ದಾರೆ.