ಜಿಲ್ಲಾ ರಾಜ್ಯಪಾಲ ಡಾ. ಗಿರೀಶ್ ಕುಚಿನಾಡ
ರಾಣೇಬೆನ್ನೂರು, ಫೆ.4- ಕಳೆದ ನಾಲ್ಕು ದಶಕಗಳಿಂದ ರಾಣೇಬೆನ್ನೂರು ಲಯನ್ಸ್ ಕ್ಲಬ್, ಶಿಕ್ಷಣ ಕ್ಷೇತ್ರವೂ ಸೇರಿದಂತೆ ಸೇವಾ ಭಾವನೆಯೊಂದಿಗೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ರಾಜ್ಯಪಾಲ ಡಾ. ಗಿರೀಶ್ ಕುಚಿನಾಡ ಹೇಳಿದರು.
ಅವರು ನಿನ್ನೆ ಲಯನ್ ಶಾಲೆಯಲ್ಲಿ ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆಯ ಸದಸ್ಯರು ತಮಗೆ ಸಿಗುವ ಅಧ್ಯಕ್ಷ ಅಥವಾ ಇನ್ನಾವುದೇ ಸ್ಥಾನವನ್ನು ಅಧಿಕಾರವೆಂದು ಪರಿಗಣಿಸದೇ, ಆ ಅವಧಿಯಲ್ಲಿ ಜನಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಎಸ್. ಅರಕೇರಿ, ಟಿ.ಸಿ. ಪಾಟೀಲ, ಬಸವರಾಜ ಬಡಿಗೇರ, ಎಂ. ಬಸವರಾಜಯ್ಯ, ಮಾಲತೇಶ ಚಳಗೇರಿ, ಆರ್. ವಿ.ಸುರಗೊಂಡ, ಶಿವಪ್ಪ ಗುರಿಕಾರ, ಬಸವರಾಜ ಪಾಟೀಲ ಇನ್ನಿತರರು ಭಾಗವಹಿಸಿದ್ದರು.