ಕೋವಿಡ್ ಸಮರದಲ್ಲಿ ರಾಜಕೀಯ ಬೆರೆಸುವುದು ಬೇಡ

ಕೋವಿಡ್ ಸಮರದಲ್ಲಿ ರಾಜಕೀಯ ಬೆರೆಸುವುದು ಬೇಡ - Janathavaniದಾವಣಗೆರೆ, ಜೂ.30- ಕೋವಿಡ್ ಸಮರದ ವಿರುದ್ಧದ ಹೋರಾಟದಲ್ಲಿ ರಾಜಕೀಯ ಮಾಡದೇ ಪಕ್ಷಾತೀತವಾಗಿ ಲಸಿಕೆ ಹಾಕಿಸುವ ಮೂಲಕ ಜನರ ಪ್ರಾಣ ರಕ್ಷಣೆಗೆ ಕಟಿ ಬದ್ಧರಾಬೇಕೆಂದು ಮಹಾನಗರ ಪಾಲಿಕೆ ಮೇಯರ್ ಎಸ್.ಟಿ ವೀರೇಶ್ ಕರೆ ನೀಡಿದ್ದಾರೆ.

ಮಹಾಪಾಲಿಕೆ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಉಚಿತ ಲಸಿಕೆ ಹಾಕಿಸುವ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ಸರ್ಕಾರಿ ಲಸಿಕೆಯನ್ನು ಕಾಂಗ್ರೆಸ್ ಪಕ್ಷದ ಬ್ಯಾನರ್ ಅಡಿ ಹಾಕಿಸುವುದಕ್ಕೆ ತಮ್ಮ  ವಿರೋಧವಿದೆ ಎಂದರು.

ಕೆೋರೆೋನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಉಚಿತವಾಗಿ ತಮ್ಮ ಸಂತ ಖರ್ಚಿನಲ್ಲಿ ಲಸಿಕೆ ನೀಡುತ್ತಿರುವುದಕ್ಕೆ ಎಸ್ಸೆಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಸರ್ಕಾರಿ ಕೋಟಾದ ಲಸಿಕೆಯನ್ನು ಖಾಸಗಿ ಬ್ಯಾನರ್ ಅಡಿಯಲ್ಲಿ ಕೆೋಡುವುದು ಸೂಕ್ತವಲ್ಲ ಎಂದು ಹೇಳಿದರು.

ತಮ್ಮ ವಾರ್ಡಿನಲ್ಲಿ ಸರ್ಕಾರದ ಲಸಿಕೆ ಬಾರದಂತೆ ತಡೆದಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಇದರಲ್ಲಿ ಸಂಸದ ಸಿದ್ದೇಶ್ವರ ಅವರದ್ದಾಗಲೀ, ತಮ್ಮ ಪಾತ್ರವಾಗಲೀ ಇಲ್ಲ. ಲಸಿಕಾ ಕೇಂದ್ರದಲ್ಲಿ ಆಗುತ್ತಿದ್ದ ಲೋಪ ಸರಿಪಡಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಗರದಲ್ಲಿರುವ 9 ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಯಲ್ಲಿ 80,545 ಡೋಸ್ ಲಸಿಕೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲೂ  ಕೂಡ 75,870 ಡೋಸ್ ಲಸಿಕೆ ಹಾಕಲಾಗಿದೆ ಎಂದು ಅವರು ಹೇಳಿದರು.

ಮೂರನೇ ಅಲೆ ಶುರುವಾದರೆ ಮಕ್ಕಳಿಗೆ ಹೆಚ್ಚು ಸೋಂಕು ತಗುಲಲಿದ್ದು, ಇದನ್ನು ತಡೆಯುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಮಕ್ಕಳ ತಜ್ಞರ ಜೆೋತೆ ಮೂರು ಬಾರಿ ಸಭೆ ನಡೆಸಲಾಗಿದೆ. ಅಪೌಷ್ಠಿಕ ಮಕ್ಕಳ ಪೋಷಕರಿಗೆ ಕಡ್ದಾಯವಾಗಿ ಲಸಿಕೆ ಹಾಕಿಸಲು ಅಗತ್ಯ ಕ್ರಮ ತೆಗೆದುಕೆೋಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ಎಲ್.ಡಿ. ಗೋಣೆಪ್ಪ, ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್, ಆರ್. ಶಿವಾನಂದ, ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!