ದಾವಣಗೆರೆ, ಜೂ.30- ಜಿಲ್ಲೆಯಲ್ಲಿ ಬುಧವಾರ 73 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 12 ಜನರು ಮೃತಪಟ್ಟಿದ್ದಾರೆ. 63 ಜನರು ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕಿ ನಲ್ಲಿ 42, ಹರಿಹರ 7, ಜಗಳೂರು 2, ಚನ್ನಗಿರಿ 12, ಹೊನ್ನಾಳಿಯ 10 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.ಜಿಲ್ಲೆಯಲ್ಲಿ 1464 ಸಕ್ರಿಯ ಪ್ರಕರಣ ಗಳಿದ್ದು, ಇಲ್ಲಿಯವರೆಗೆ 553 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
November 26, 2024