ಮೇಯರ್ ಚುನಾವಣೆಗೆ ಮತ ಚಲಾಯಿಸಿದರೆ ಶಂಕರ್ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ

ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ದಾವಣಗೆರೆ, ಫೆ.4-  ಮುಂಬರುವ ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆ ಮಾಡಿಕೊಂಡಿರುವ ಸಚಿವ ಆರ್. ಶಂಕರ್ ಮತ ಚಲಾಯಿಸಿದ್ದೇ ಆದರೆ, ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇತ್ತೀಚಿಗಷ್ಟೇ ನವೀಕೃತ ಗೊಂಡ ರಾಣೇಬೆನ್ನೂರು ಮತದಾರರ ಪಟ್ಟಿಯಲ್ಲಿ ಸಚಿವ ಆರ್.ಶಂಕರ್ ಅವರ ಹೆಸರಿದೆ. ದಾವಣಗೆರೆಯ ಮತದಾರರ ಪಟ್ಟಿಯಲ್ಲೂ ಹೆಸರು ಸೇರಿಸಲಾಗಿದೆ. ಒಬ್ಬ ಮತದಾರನ ಹೆಸರು ಎರಡು ಕಡೆ ಇದ್ದರೆ ಅದು ಅನೂರ್ಜಿತವಾಗುತ್ತದೆ. ಶಂಕರ್ ಇಲ್ಲಿ ಮತ ಚಲಾಯಿಸಿದರೆ ಅವರು ಸಚಿವ ಸ್ಥಾನವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.

ಇನ್ನು ತುಮಕೂರು ಕ್ಷೇತ್ರದ ಚಿದಾನಂ ದಗೌಡ ಅವರ ಹೆಸರನ್ನೂ ಮತದಾರರ ಪಟ್ಟಿ ಯಲ್ಲಿ ಸೇರಿಸಲಾಗಿದ್ದು, ಅವರ ಬಗ್ಗೆಯೂ ಮಾಹಿತಿ ಪಡೆಯುತ್ತೇವೆ. ಯಾವ ಕಾರಣಕ್ಕೂ ಮೇಯರ್ ಚುನಾವಣೆ ಯಲ್ಲಿ ಬಿಜೆಪಿ ವಾಮ ಮಾರ್ಗದಿಂದ ಅಧಿಕಾರ ಪಡೆಯಲು ಬಿಡುವುದಿಲ್ಲ. ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ ಎಂದು ಅವರು ತಿಳಿಸಿದರು.

ಎಲ್ಲಾ ಕಾನೂನು ಬಾಹಿರ ಕೆಲಸಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರೇ ಕಾರಣ ಎಂದು ಆರೋಪಿಸಿದ ಬಸವರಾಜ್, ಬಿಜೆಪಿ ಮುಖಂಡರ ಮಾತು  ಕೇಳಿ, ಸಂವಿ ಧಾನ ಬಾಹಿರವಾಗಿ ಮತದಾರರ ಪಟ್ಟಿ ಯಲ್ಲಿ ಹೆಸರುಗಳನ್ನು ಸೇರಿಸುವ ಅಧಿಕಾರಿ ಗಳು ಖಂಡಿತಾ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ, ಅಂತಿಮ ಮತದಾರರ ಪಟ್ಟಿ ನೀಡಲು ಸತಾಯಿಸಿದ ಅಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದ ನಂತರ ನೀಡಿದ್ದಾರೆ. ಆರ್.ಶಂಕರ್ ಹಾಗೂ ಚಿದಾನಂದಗೌಡ ಅವರ ಹೆಸರು ಗಳನ್ನು ತರಾತುರಿಯಲ್ಲಿ ಸೇರಿಸಿ ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರು ಸಂಚಾರಿ ಮತದಾರರಾಗಿದ್ದಾರೆ. ದಾವಣಗೆರೆ ಮೇಯರ್ ಚುನಾವಣೆ ವೇಳೆ ಪಟ್ಟಿಯಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿ. ಮುಂ ದಿನ ದಿನ ಮತ್ತೊಂದು ಜಿಲ್ಲೆಯ ಚುನಾವಣೆ ಯಲ್ಲಿ ಮತ ಚಲಾಯಿಸಲು ಹೊರಡುತ್ತಾರೆ. ಇದಕ್ಕೆ ಆಸ್ಪದ ನೀಡಬಾರದು. ಅನ್ಯ ಜಿಲ್ಲೆಯ ಎಲ್ಲಾ ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನೂ ಮತದಾರರ ಪಟ್ಟಿಯಿಂದ ತೆಗೆಯುವಂತೆ ಆಗ್ರಹಿಸಿ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಅಬ್ದುಲ್  ಲತೀಫ್, ಮುಖಂಡರಾದ ಎಸ್.ಮಲ್ಲಿಕಾರ್ಜುನ್, ಜಬ್ಬಾರ್, ಸುಭಾನ್, ಉದಯ ಕುಮಾರ್, ಶಿವಕುಮಾರ್, ರಾಜಾ ಭಕ್ಷಿ ಹಾಗು ಇತರರು ಉಪಸ್ಥಿತರಿದ್ದರು.

error: Content is protected !!