ಹರಿಹರ, ಏ.6- ಇಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಸಂಘದಿಂದ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿ ಅವರ 14ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು. ಸಂಘದ ಹೆಚ್.ಕೆ.ಮೂರ್ತಿ, ಎಸ್.ಆರ್.ಮಧುಸೂದನ್, ಬಸವರಾಜ್, ನಾಗರಾಜಪ್ಪ, ಹನುಮಂತ, ರಾಜಪ್ಪ, ಕೃಷ್ಣ, ಸಿದ್ದಪ್ಪ, ನಿಂಗಪ್ಪ, ಕರಿಬಸಪ್ಪ, ಪರಶು, ನಾಗನಗೌಡ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ ಭಾಗವಹಿಸಿದ್ದರು.
April 19, 2025