ರಾಣೇಬೆನ್ನೂರು, ಏ.6- ತಾಲ್ಲೂಕಿನ ಜೋಯಿಸರ ಹರಳಹಳ್ಳಿಯಲ್ಲಿ ಹಾನಗಲ್ ಕುಮಾರಸ್ವಾಮಿ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಹಾನಗಲ್ ಕುಮಾರಸ್ವಾಮಿ ಗದ್ದುಗೆ ಬಳಿ ರಥೋತ್ಸವಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮಿಗಳು ಚಾಲನೆ ನೀಡಿದರು. ಸಮಾಳ, ಡೊಳ್ಳು, ವೀರಗಾಸೆ ತಂಡಗಳು ರಥೋತ್ಸವಕ್ಕೆ ಹೆಚ್ಚಿನ ಮೆರುಗು ತಂದವು. ಭಕ್ತರು ಜೈಕಾರ ಹಾಕುತ್ತಾ ತೇರನ್ನು ಎಳೆದರು.
ಹೊಸಪೇಟೆಯ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಶ್ರೀ ಡಾ.ಸಂಗನಬಸವ ಸ್ವಾಮಿಗಳು, ಘೋಡಗೇರಿ ವಿರಕ್ತಮಠದ ಶ್ರೀ ಕಾಶಿನಾಥ ಸ್ವಾಮಿಗಳು, ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠದ ನಾಡೋಜ ಶ್ರೀ ಡಾ. ಅನ್ನದಾನ ಸ್ವಾಮಿ, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವಸ್ವಾಮಿ, ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಅರುಣ ಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ಅರಣ್ಯ ಕೈಗಾರಿಕೆ ನಿಗಮದ ನಿರ್ದೇಶಕಿ ಭಾರತಿ ಜಂಬಗಿ, ಗದಿಗೆಪ್ಪ ಹೊಟ್ಟಿಗೌಡ್ರ, ಶಿವಕುಮಾರ ಮುದ್ದಪ್ಪಳವರ, ದಾನಪ್ಪಗೌಡ ಪಾಟೀಲ, ವೀರಭದ್ರಪ್ಪ ಗೊಡಚಿ, ಎಸ್.ಬಿ. ಚೌಡಪ್ಪಳವರ, ಅಶೋಕ ಹೊಟ್ಟಿಗೌಡ್ರ, ಗದಿಗೆಪ್ಪ ಮುದ್ದಪ್ಪಳವರ, ಶೇಖಣ್ಣ ಚೌಡಪ್ಪಳವರ, ಚನ್ನಕೇಶವ ಅರ್ಕಾಚಾರಿ ಹಾಗು ಇನ್ನಿತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.