ದಾವಣಗೆರೆ, ಫೆ.3- ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆವಾಂತರ ಪತ್ರಿಕೆ ಸಂಪಾದಕ ಹೆಚ್. ದುಗ್ಗಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಸರ್ಕಾರಿ ನೌಕರಿ ಸೇರಿದಂತೆ, ಇನ್ನಿತರೆ ಸೌಲಭ್ಯಗಳನ್ನು ಪಡೆಯಲು ಮತ್ತು ಉನ್ನತ ಶಿಕ್ಷಣಕ್ಕಾಗಿ 2ಎ ಮೀಸಲಾತಿ ಅವಶ್ಯಕತೆ ಇದ್ದು, ಇದಕ್ಕಾಗಿ ಸಮಾಜ ಹಮ್ಮಿ ಕೊಂಡಿರುವ ಪಾದಯಾತ್ರೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ದುಗ್ಗಪ್ಪ ಅವರು ದಾವಣಗೆರೆ-ಆನಗೋಡು ಮಧ್ಯೆ ವಿಶ್ರಾಂತಿಗಾಗಿ ತಂಗಿದ್ದ ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರ ದರ್ಶನಾಶೀರ್ವಾದ ಪಡೆದರು.
ಪಂಚಮಸಾಲಿ ಸಮಾಜವನ್ನು 2ಎ ವ್ಯಾಪ್ತಿಗೆ ಒಳಪಡಿಸುವಂತೆ ಈ ಹಿಂದೆ ಹಮ್ಮಿಕೊಂಡಿದ್ದ ಹೋರಾಟದಿಂದ ಪ್ರಯೋಜನವಾಗಲಿಲ್ಲ. ಮುಂದುವರೆದ ಭಾಗವಾಗ ಇದೀಗ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಸರ್ಕಾರ ಸಮಾಜದ ಮನವಿ ಪುರಸ್ಕರಿಸಿ 2ಎ ಮೀಸಲಾತಿ ನೀಡುವಂತೆ ದುಗ್ಗಪ್ಪ ಆಗ್ರಹಿಸಿದ್ದಾರೆ.