ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲನೆ

ಕೂಡ್ಲಿಗಿ, ಏ.6- ತಾಲ್ಲೂಕಿನ ಹುಡೇಂ ಗ್ರಾಮ ಪಂಚಾಯ್ತಿಯಲ್ಲಿ  ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಸ್ವಾಮಿ, ಇಂಜಿನಿಯರ್ ಬಿ.ಎಸ್‌.ಪಿ ಪ್ರಸನ್ನ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದರು. 

ಭೇಟಿ ವೇಳೆ ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಬಿಎಸ್‌ಪಿ ಪ್ರಸನ್ನ,   ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಕೂಲಿಕಾರರಿಗೆ ಇದೊಂದು ಒಳ್ಳೆಯ ಯೋಜನೆಯಾಗಿದೆ. ವೈಯಕ್ತಿಕ ಕಾಮಗಾರಿ ಹಾಗೂ ಸಾಮೂಹಿಕ ಕಾಮಗಾರಿಗಳಲ್ಲಿ ತೊಡಗಿಸಿಕೊಂಡು ಯೋಜನೆಯ ಲಾಭ ಪಡೆಯಬೇಕು ಎಂದರು.

ಹುಡೇಂ ಗ್ರಾ.ಪಂ. ಹಾಗೂ ಹೊಸೂರು ಗ್ರಾಮದಲ್ಲಿ  ತಾಲ್ಲೂಕಿನಲ್ಲಿ ಒಟ್ಟು 1,432 ಜಾಬ್ ಕಾರ್ಡ್‌ಗಳನ್ನು ನೀಡಲಾಗಿದ್ದು, ಇದರಲ್ಲಿ ಹುಡೇಂ ಹಾಗೂ ಹೊಸೂರು ಗ್ರಾಮದಲ್ಲಿರುವ ಒಟ್ಟು 500 ಕೂಲಿಗಾರರ ಜಾಬ್ ಕಾರ್ಡ್ ಫೀಡ್‌ ಆಗಿದ್ದು ಇದರಲ್ಲಿ 400 ಕ್ಕೂ ಹೆಚ್ಚು ಕೂಲಿಕಾರರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂದರು.

ಕೋವಿಡ್ ಹೆಚ್ಚಾಗಿದ್ದು, ಜೊತೆಗೆ ಬೇಸಿಗೆ ಇರುವ ಕಾರಣದಿಂದ ಕೂಲಿಯನ್ನು ಶೇ.30 ಹೆಚ್ಚಳ ಮಾಡಲಾಗಿದೆ ಎಂದು ಕೂಲಿಕಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಬಿ. ರಾಮಚಂದ್ರಪ್ಪ, ಸುಂದರಮ್ಮ ಮಲ್ಲಿಕಾರ್ಜುನ್, ನಾಗಮ್ಮ ಗದ್ದಿಗಗೆ ಸ್ವಾಮಿ, ಶಶಿಕಲಾ ಜಯಣ್ಣ, ಕುರಿ ಪಾಲಯ್ಯ, ಎಲ್ಲಪ್ಪ ಹಾಗೂ ಮೇಟಿ ನಾಗರಾಜ್, ಗೋವಿಂದಪ್ಪ, ಸಿದ್ದೇಶ್
ಹಾಗೂ ಹೆಚ್. ಮಂಜುನಾಥ್, ಗ್ರಾ.ಪಂ. ಸಿಬ್ಬಂದಿ ವರ್ಗ ದವರು ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

error: Content is protected !!