ಹರಿಹರ, ಏ.5- ತಾಲ್ಲೂಕು ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಅವರು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ರೇವಣಸಿದ್ದಪ್ಪ ಅಂಗಡಿ, ಕಳೆದ ಹಲವು ದಶಕಗಳಿಂದ ಜಾನಪದ, ಕಲೆ, ಸಾಹಿತ್ಯ. ಸಂಗೀತ, ಮತ್ತು ನಾಡಿನ ಕಲಾ ಪರಂಪರೆಯ ಉಳಿವು ಮತ್ತು ಬೆಳವ ಣಿಗೆಗೆ ಸದಾಕಾಲವೂ ನಿರಂತರವಾಗಿ ಸೇವೆ ಸಲ್ಲಿಸುವುದರ ಜೊತೆಗೆ, ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಮತ್ತು ಪರಿಷತ್ತಿನ ಎಲ್ಲಾ ಯೋಜನೆಗಳನ್ನು ಕನ್ನಡ ಅಭಿಮಾನಿಗಳಿಗೆ ಪರಿಚಯಿಸುತ್ತಾ, ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಈ ಬಾರಿ ನನ್ನನ್ನು ಕೈ ಬಿಡುವುದಿಲ್ಲ ಎಂಬ ಆತ್ಮವಿಶ್ವಾಸ ಹೊಂದಿದ್ದೇನೆ ಎಂದರು.
ದಾವಣಗೆರೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ, ಶಿಕ್ಷಕರ ಸಂಘದ ಮುಖಂಡ ರಾದ ಮುದ್ದೇರ ಹನುಮಂತಪ್ಪ ಸಿರಿಗೆರೆ, ಕೆ.ಪಿ. ಬಸವ ರಾಜ್, ಮುಬಾರಕ್ ಅಲಿ. ಸದಾನಂದ ಕುಂಬಳೂರು, ಸೀತಾ ಎಸ್. ನಾಯ್ಕ್, ರತ್ನವ್ವ ಸಾಲಿಮಠ, ಎ.ಡಿ. ಕೊಟ್ಟಪ್ಪ, ಡಾ. ರುದ್ರಮುನಿ ಹಿರೇಮಠ, ಬಿ. ಉಮೇಶ್, ಪಿ. ಕುಲಕರ್ಣಿ, ಬಿ.ವಿ. ವೀರಪ್ಪ, ಬಿ. ಷಣ್ಮುಖ, ಶಾಂತ ಗೌಡ್ರು, ಶಿವಮೂರ್ತಿ, ರತ್ನಮ್ಮ, ಲೀಲಾ, ಮಲ್ಲಮ್ಮ ಅಂಗಡಿ, ರೇಣುಕಾ, ಕುಸುಮ ನಿಂಗಪ್ಪ , ಜಗಳೂರು ಚಂದ್ರಪ್ಪ ಇನ್ನಿತರರಿದ್ದರು.