ಬಿ.ಎಸ್ಸಿ ಪುರುಷರ ಸಾಂಪ್ರದಾಯಿಕ ಉಡುಗೆಗಳ ವಿಭಾಗ ಉದ್ಘಾಟನೆ

ದಾವಣಗೆರೆ, ಏ.4- ನಗರದ ಪಿ.ಜೆ. ಬಡಾವಣೆಯ ಬಿ.ಎಸ್.ಸಿ. ಮೇನ್ಸ್ ಶಾಖೆಯಲ್ಲಿ ಎಥ್ನಿಕ್ ವೇರ್, ಇಂಡೋವೆಸ್ಟರ್ನ್ ವೇರ್ ಮತ್ತು ಸೂಟ್ ಉಡುಗೆಗಳ ವಿಭಾಗವನ್ನು ಪ್ರಾರಂಭಿಸುತ್ತಿದ್ದೇವೆ. ಈ ಪ್ರಾರಂಭೋತ್ಸವವನ್ನು ಕಲರ್ಸ್ ಕನ್ನಡ ವಾಹಿನಿಯ `ಕನ್ನಡತಿ’ ಧಾರಾವಾಹಿಯ ನಟ ಕಿರಣ್‍ರಾಜ್‌ ಅವರು ಪ್ರಾರಂಭಿಸಿದರು. 

ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬೇಕಾಗುವ ಪುರುಷರ ಸೂಟ್ಸ್, ಶೇರ್‍ವಾನಿ ಇಂಡೋವೆಸ್ಟರ್ನ್, ಕುರಾ, ಬ್ಲೇಜರ್ ಹಾಗೂ ಧೋತಿ, ಶಲ್ಯ, ಪೇಟಾ, ವಿಭಿನ್ನ ಶೈಲಿಯ ಸಂಗ್ರಹವಾಗಿದೆ. ನಮ್ಮ ಭಾರತ ದೇಶವು ಅನೇಕ ವಿಭಿನ್ನ ಸಂಸ್ಕೃತಿಯ ತಾಣವಾಗಿದ್ದು, ಇದಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಅನೇಕ ಸಾಂಪ್ರದಾಯಿಕ ಉಡುಗೆಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಆದ್ದರಿಂದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‍ನ ಎಲ್ಲಾ ಶಾಖೆಗಳಲ್ಲಿ ಈ ಉಡುಗೆಗಳ ಸಂಗ್ರಹವನ್ನು ವಿಸ್ತರಿಸಿದ್ದೇವೆ ಎಂದು ತಿಳಿಸಲು ಹರ್ಷವಾಗುತ್ತದೆ ಎಂದು ಬಿಎಸ್‌ಸಿ ಪ್ರಕಟಣೆ ತಿಳಿಸಿದೆ.

ಈ ಸಂದರ್ಭದಲ್ಲಿ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‍ನ ಮಾಲೀಕರು, ಗ್ರಾಹಕರು, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!