ಹರಿಹರದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ವಸ್ತು ಪ್ರದರ್ಶನ

ಹರಿಹರ, ಏ.4- ವಿದ್ಯಾರ್ಥಿಗಳಲ್ಲಿ ಕುತೂಹಲ, ಸೃಜನಶೀಲತೆ, ವೈಜ್ಞಾನಿಕ ಮನೋಪ್ರವೃತ್ತಿ, ಹೊಸ ಹೊಸ ಆವಿಷ್ಕಾರ ಇತ್ಯಾದಿ  ಗುಣಗಳನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ  ವಸ್ತು ಪ್ರದರ್ಶನ ಎಲ್ಲರ ಗಮನ  ಸೆಳೆಯಿತು.

ವಸ್ತು ಪ್ರದರ್ಶನದಲ್ಲಿ ಮುಖ್ಯವಾಗಿ ತುಂತುರು ನೀರಾವರಿ ಪದ್ಧತಿ, ಉಸಿರಾಟ ಕ್ರಿಯೆ, ಬಿರ್ಲಾ ಶೈಲಿಯ  ಉತ್ಪಾದನಾ ಯಂತ್ರ, ಸಿಮೆಂಟ್ ತಯಾರಿಕಾ ಘಟಕ, ನೀರಿನ ಶುದ್ಧೀಕರಣ ಘಟಕ, ಡಾರ್ವಿನ್‌ನ ವಿಕಾಸವಾದ, ಹೊಗೆ ರಹಿತ ಇಂಧನ, ಬಾಹ್ಯಾಕಾಶ ವ್ಯವಸ್ಥೆ, ಪುರಾತನ ನಾಣ್ಯಗಳು ಹಾಗೂ ನೋಟುಗಳ ಸಂಗ್ರಹ, ಹಳ್ಳಿಗಳಿಂದ ಪಟ್ಟಣದ ಕಡೆಗೆ ಜೀವನ ಶೈಲಿಯ ಚಿತ್ರಣ, ಭಾರತದ ನದಿ ವ್ಯವಸ್ಥೆ ಹೀಗೆ ಹಲವಾರು ಮಾದರಿಗಳು ವಸ್ತು ಪ್ರದರ್ಶನದ ಭಾಗವಾಗಿದ್ದವು.

ಈ ವಸ್ತು ಪ್ರದರ್ಶನ ಸ್ಪರ್ಧೆಯ ತೀರ್ಪುಗಾರಿಕೆಯನ್ನು ನೆರವೇರಿಸಿ ಕೊಟ್ಟವರು  ಆದಿತ್ಯ ಬಿರ್ಲಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಂತೋಷ್, ಸೈಂಟ್ ಮೇರಿಸ್ ಪ್ರೌಢಶಾಲೆ ಶಿಕ್ಷಕ ಸ್ಟೀವನ್ ತೀರ್ಪುಗಾರರಾಗಿ ಆಗಮಿ ಸಿದ್ದರು.  ಕಾಲೇಜು ಪ್ರಾಂಶುಪಾಲ ಬ್ಯಾಪ್ಟಿಸ್ಟ್ ಸನ್ನಿ ಗುಡಿನೋ, ಕುಮಾರಿ ಪ್ರಿನ್ಸಿ ಫ್ಲಾವಿಯಾ, ವಸ್ತುಪ್ರದರ್ಶನ ಸಂಯೋಜಕರಾದ ಬಿ. ಕವಿತಾ, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!