ದಾವಣಗೆರೆ ಕೆ.ಟಿ.ಜೆ. ನಗರ 2ನೇ ಮೇನ್, 13ನೇ ಕ್ರಾಸ್ ವಾಸಿ, ಎಸ್. ಬಸವರಾಜ (ಬ್ಯ್ಲೂ ಮೌಂಟೇನ್) ಇವರ ತಾಯಿ ಶ್ರೀಮತಿ ನಾಗೂರು ನಾಗಮ್ಮ ಅವರು ದಿನಾಂಕ 31.01.2021ರ ಭಾನುವಾರ ಮಧ್ಯಾಹ್ನ 3.40 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 01.02.2021ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 24, 2024