ಹೂವಿನಹಡಗಲಿ, ಏ. 4 – ಶ್ರೀ ಕ್ಷೇತ್ರ ಮೈಲಾರ, ಕೊಟ್ಟೂರು, ಕುರುಗೋಡು, ಹಂಪಿ, ಬಳ್ಳಾರಿ, ಮದಲಗಟ್ಟೆ, ಉಚ್ಚಂಗಿದುರ್ಗ ಮೊದಲಾದ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ ಎಂ.ಹೆಚ್.ಪ್ರಕಾಶರಾವ್ ಅವರು ಸಹಾಯಕ ಆಯುಕ್ತರಾಗಿ ಪದೋನ್ನತಿ ಹೊಂದಿ ಬಳ್ಳಾರಿಗೆ ಈಗಾಗಲೇ ವರ್ಗವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ತಾಲ್ಲೂಕಿನ ಶ್ರೀ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶನಿವಾರ ಗೌರವ ಸನ್ಮಾನ ಮಾಡಲಾಯಿತು.
ಇದುವರೆಗೂ ಎಲ್ಲಾ ಸಿಬ್ಬಂದಿ ಕೊಟ್ಟ ಸಹಕಾರ ಮತ್ತು ಸೇವೆಯನ್ನು ಪ್ರಕಾಶರಾವ್ ನೆನಪಿಸಿಕೊಳ್ಳುತ್ತಾ, ಧನ್ಯತಾಭಾವದ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಮೈಲಾರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾದ ಹೆಚ್. ಗಂಗಾಧರಪ್ಪ ಸೇರಿದಂತೆ ವಿವಿಧ ದೇವಸ್ಥಾನಗಳ ಸಿಬ್ಬಂದಿಗಳು ಹಾಜರಿದ್ದರು.