ಹರಪನಹಳ್ಳಿ, ಜ.29- ಆಕಸ್ಮಿಕ ಬೆಂಕಿ ಬಿದ್ದು ಹೊಲದಲ್ಲಿದ್ದ ಮೇವಿನ ಬಣವಿಗಳು ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ತೊಗರಿಕಟ್ಟೆ ಗ್ರಾಮದ ವ್ಯಾಪ್ತಿಯಲ್ಲಿ ಜರುಗಿದೆ.
ಗ್ರಾಮದ ಪಕ್ಕದಲ್ಲಿರುವ ಅರಣ್ಯದ ಒಣಹುಲ್ಲಿಗೆ ತಗುಲಿದ್ದ ಬೆಂಕಿ ಗಾಳಿಯಿಂದಾಗಿ ಪಕ್ಕದ ಬಾರ್ಕಿ ನಾಗರಾಜಪ್ಪನವರ ಹೊಲದಲ್ಲಿನ ಬಣವೆಗೆ ತಗುಲಿದ್ದು, ಮೆಕ್ಕೆಜೋಳ ಹಾಗೂ ಊಟದ ಜೋಳದ ಮೇವಿನ ಬಣವಿ ಸುಟ್ಟುಹೋಗಿದೆ. ಬಾರ್ಕಿ ಯುವರಾಜನಿಗೆ ಸೇರಿದ ರಾಗಿ ಹುಲ್ಲು, ಈಡಿಗರ ಶಂಕ್ರಪ್ಪನಿಗೆ ಸೇರಿದ ತೊಗರಿಬೆಳೆ ಹಾಗೂ ಗಾಯಿತ್ರಮ್ಮನಿಗೆ ಸೇರಿದ ರಾಗಿ ಬಣವಿ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಮುನಿಸ್ವಾಮಿ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ.