ಮಹಾನಾಯಕ ಧಾರಾವಾಹಿಯಿಂದ ಯುವ ಸಮುದಾಯದಲ್ಲಿ ಜಾಗೃತಿ

ಜಗಳೂರು, ಜ.28 – ಡಾ.ಬಿ ಆರ್ ಅಂಬೇಡ್ಕರ್ ಅವರ ಮಹಾನಾಯಕ ಧಾರಾ ವಾಹಿ ವಿದ್ಯಾರ್ಥಿ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುತ್ತಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಡಿ.ದುರುಗಪ್ಪ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಮಹಾನಾಯಕ ಅಂಬೇಡ್ಕರ್ ಫ್ಲೆಕ್ಸ್ ಅನಾವರಣಗೊಳಿಸಿ ಮಾತನಾಡಿದರು.

ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ವಿಶ್ವಮಾನವರಾಗಿದ್ದಾರೆ. ಅಂಬೇಡ್ಕರ್ ಅವರ ಆದರ್ಶ ಮೌಲ್ಯಗಳು ನಮಗೆ ದಾರಿ ದೀಪವಾಗಬೇಕು ಎಂದರು. 

ಪ.ಪಂ ಮುಖ್ಯಾಧಿಕಾರಿ ರಾಜು.ಡಿ.ಬಣಕಾರ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಮಹಾನಾಯಕ ಧಾರಾವಾಹಿಯನ್ನು ಪ್ರತಿಯೊಬ್ಬರೂ ವೀಕ್ಷಿಸಿ ಜಾಗೃತರಾಗಬೇಕು ಎಂದು ಹೇಳಿದರು. 

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ.ಮಾತನಾಡಿ, ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಎಲ್ಲರೂ ಗೌರವಿಸಬೇಕು ಸರ್ವರೂ ಒಗ್ಗೂಡಿ ಪ್ರತಿ‌ ಗ್ರಾಮಗಳಲ್ಲಿ ಫ್ಲೆಕ್ಸ್ ಅನಾವರಣ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ. ಪ್ರಗತಿಪರ ಸಂಘಟನೆ ಮುಖಂಡರಾದ ಆರ್.ಓಬಳೇಶ್, ಲೋಕೇಶ್.ಬಿ, ಸತೀಶ್ ಮಲೆಮಾಚಿಕೆರೆ, ಧನ್ಯಕುಮಾರ್, ಎಂ.ರಾಜಪ್ಪ ಮಾದಿಹಳ್ಳಿ, ಕೆ.ಮಂಜಪ್ಪ, ಹನುಮಂತಪ್ಪ, ಅನಂತರಾಜ್, ಅಂಜಿನಪ್ಪ ತಮಲೇಹಳ್ಳಿ, ಸತ್ಯಮೂರ್ತಿ, ಚಂದ್ರಪ್ಪ, ಕುಬೇಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!