ಹೀರೋ ಇಲೆವನ್ ತಂಡಕ್ಕೆ ಪ್ರಥಮ ಸ್ಥಾನ
ಮಲೇಬೆನ್ನೂರು, ಮಾ.31- ಕೊಮಾರನಹಳ್ಳಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಟೆನ್ನಿಸ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾದ ದಾವಣಗೆರೆ ಹೀರೋ ಇಲೆವನ್ ತಂಡಕ್ಕೆ ಶಾಸಕ ಬಿ.ಪಿ. ಹರೀಶ್ 35 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಅಭಿನಂದಿಸಿದರು.
ದ್ವಿತೀಯ ಸ್ಥಾನ ಪಡೆದ ಕೊಮಾರನಹಳ್ಳಿಯ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡಕ್ಕೆ 25 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಯಿತು. ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ, ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ದಿಶಾ ಸಮಿತಿ ಸದಸ್ಯ ಐರಣಿ ಅಣ್ಣಪ್ಪ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಗ್ರಾ.ಪಂ. ಅಧ್ಯಕ್ಷ ಐ.ಪಿ. ರಂಗನಾಥ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಐರಣಿ ಮಹೇಶ್ವರಪ್ಪ, ಗ್ರಾ.ಪಂ. ಸದಸ್ಯರಾದ ನೇತ್ರಾವತಿ ಹನುಮಂತಪ್ಪ ಉಪಸ್ಥಿತರಿದ್ದರು.
ರಾಮಣ್ಣ ಸ್ವಾಮಿ, ಜಿ. ರಂಗಪ್ಪ, ಎಸ್. ರಂಗಪ್ಪ, ಯು. ನಾಗಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಐರಣಿ ಮೂರ್ತಿ, ಬಿ. ಮಂಜುನಾಥ್, ಪುರಸಭೆಯ ನಾಮಿನಿ ಸದಸ್ಯರಾದ ಪಿ.ಆರ್. ರಾಜು, ಎ.ಕೆ. ಲೋಕೇಶ್, ಮೈದಾನದ ದಾನಿಗಳಾದ ಜಿ. ಮಹೇಶ್ವರಪ್ಪ, ಕೆ.ಎಂ. ಕುಮಾರಸ್ವಾಮಿ, ಕ್ರೀಡಾ ಆಯೋಜಕರಾದ ದುಂಡಪ್ಪ, ಪ್ರವೀಣ್, ಸುನೀಲ್, ಚಿದಂಬರ್, ಹಾಲೇಶ್, ರಂಗನಾಥ್, ಕೃಷ್ಣ, ಚೇತನ್ ಇನ್ನಿತರರಿದ್ದರು.