ಪಂಚಮಸಾಲಿಗಳು ಕ್ರಾಂತಿಯ ಸ್ವರೂಪ ಗಟ್ಟಿಯಾಗಿ ನಿಂತರೆ ಸರ್ಕಾರ ಬೀಳುವುದು ಖಚಿತ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ

ಹರಪನಹಳ್ಳಿ, ಜ.26- ಪಂಚಮಸಾಲಿಗಳು ಕ್ರಾಂತಿಯ ಸ್ವರೂಪವಾಗಿದ್ದು, ಗಟ್ಟಿಯಾಗಿ ನಿಂತರೆ ಸರ್ಕಾರವೇ ಬಿದ್ದು ಹೋಗುತ್ತದೆ ಎಂದು ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಪಾದ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಜನ ಜಾಗೃತಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಪಾದಯಾತ್ರೆಯ ಕೂಗು ಕೇಳುವುದಿಲ್ಲ. ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆಯಂತೆ ಕೇಸರಿ ಶಾಲು, ಹಸಿರು ಶಾಲು ಮೇಲೆ ಬಾರಿಕೋಲು ಹಾಕಿಕೊಂಡು ಉಗ್ರ ಚಳವಳಿ ಮಾಡುವ ಮೂಲಕ ದಾವಣಗೆರೆಯಲ್ಲಿ ನಾಂದಿ ಹಾಡುತ್ತೇವೆ. ಯಾವುದೋ ಕಾರಣಕ್ಕೆ ನಮ್ಮ ಧಾರ್ಮಿಕ ಪೀಠಗಳು ದೂರ ಇದ್ದವು, ಆದರೆ ಈ ಮೀಸಲಾತಿ ಹೋರಾಟ ಕೂಡಿಸಿದೆ, ಇದು ಶಾಶ್ವತವಾಗಿ ಕೂಡಿದೆ ಎಂದು ಹೇಳಿದರು. ಈವರೆಗಿನ ಸರ್ಕಾರಗಳು ಮೂಗಿಗೆ ತುಪ್ಪ ಹಚ್ಚುತ್ತಾ ಬಂದಿವೆ, ಆದರೆ, ಯಡಿಯೂರಪ್ಪನವರು ಹಾಗೆ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಹೋರಾಟ ಕ್ರಾಂತಿ ರೂಪ ತಾಳುವುದರಲ್ಲಿ ನ್ಯಾಯ ಒದಗಿಸಿ ಎಂದು ಅವರು, ಕಿತ್ತೂರು ಮಾದರಿ ಕರ್ನಾಟಕ, ವಿಜಯ ನಗರ ಮಾದರಿ ಕರ್ನಾಟಕ ಕಟ್ಟಬೇಕಾಗಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮಾಜದವರ 2ಎ ಮೀಸಲಾತಿ ಬೇಡಿಕೆ ಆದಷ್ಟು ಬೇಗ ಈಡೇರಿಸಿ ಅವರ ಹೋರಾಟವನ್ನು ನಿಲ್ಲಿಸಿ ಪಂಚಮಸಾಲಿ ಸಮಾಜ ಇನ್ನೂ ಪೂರ್ಣವಾಗಿ ಬೀದಿಗಿಳಿದಿಲ್ಲ, ಶ್ರೀಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದರು.

ನೀವು ಕೇಳುತ್ತಿರುವುದು ಮೂಲಭೂತ ಹಕ್ಕುಗಳನ್ನು ಹೊರತು ಬೇರೇನು ಅಲ್ಲ, ನಿಮಗೆ ಇದರ ಅವಶ್ಯಕತೆ ಇದೆ. ನಾವು ನಿಮ್ಮ ಜೊತೆಗಿದ್ದೇವೆ ಎಂದು ಸರ್ಕಾರಕ್ಕೆ ಹೇಳಿದ ಅವರು, ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರ ಬಳಿ ಈ ಕುರಿತು ಮಾತನಾಡುವೆ, ಅವರೂ ಸಹ ಸರ್ಕಾರಕ್ಕೆ ಒತ್ತಾಯ ಮಾಡುತ್ತಾರೆ ಎಂದು ಹೇಳಿದರು.

ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಅಧ್ಯಕ್ಷ ಡಾ.ವಿಜಯಾನಂದ ಕಾಶಪ್ಪನವರು, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಲಿಂಗಾಯಿತ ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ  ಪಿ.ಬೆಟ್ಟನಗೌಡ, ಅಕ್ಷರ ಸಿಡ್ಸ್ ಮಾಲೀಕ ಅರಸಿಕೇರಿ ಎನ್.ಕೊಟ್ರೇಶ್, 2ಎ ಮೀಸಲಾತಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪೂಜಾರ, ಗೌರವಾಧ್ಯಕ್ಷ ಎಂ.ಪರಮೇಶ್ವರಪ್ಪ, ಎಸ್.ಪಿ. ಪ್ರಭಾಕರ್ ಗೌಡ, ಕಂಚಿಕೇರಿ ಎಂ.ಟಿ ಸುಭಾಷ್‌ಚಂದ್ರ,   ಟಿ.ಎ.ಪಿ.ಸಿ.ಎಂ ಎಸ್. ಅಧ್ಯಕ್ಷ ಪಿ.ಪ್ರೇಮಾ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಪಿ.ಕರಿಬಸಪ್ಪ, ಕಾರ್ಯದರ್ಶಿ ಬಸವರಾಜ ಅಡವಿಹಳ್ಳಿ, ತಿಮ್ಲಾಪುರ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ. ಸದಸ್ಯರುಗಳಾದ ಪಿ.ರೇಖಮ್ಮ. ಉಮಾ ಶಂಕರ್, ಲೀಲಾ ಲಿಂಗರಾಜ್, ಮುಖಂಡರುಗಳಾದ  ಕುಂಚೂರು ವೀರಣ್ಣ, ಶಶಿಧರ ಪೂಜಾರ್, ಮತ್ತಿಹಳ್ಳಿ ಅಜ್ಜಣ್ಣ, ಮಂಜುನಾಥ ಪೂಜಾರ್, ಜೆ. ಓಂಕಾರಗೌಡ, ಬಿ.ಎಸ್.ಲಿಂಗರಾಜ್, ಹಾರಕನಾಳು ಪ್ರಕಾಶ ಗೌಡ,  ಎಸ್. ಸುರೇಶ್, ವಿರೇಶ್, ನೀಲಗುಂದ ಸಿದ್ದೇಶ್, ಆರ್.ರೇವಣ್ಣ, ಬಸವರಾಜ್, ಕೆಇಬಿ ಕರಿಬಸಪ್ಪ, ಪರಮೇಶ್, ಎ.ಜಿ.ಕೊಟ್ರಗೌಡ, ಕೊಟ್ರೇಶ್, ಬೆಲೂರು ಸಿದ್ದೇಶ್, ಬೋರ್‌ವೆಲ್ ಶಂಬಣ್ಣ ಸೇರಿದಂತೆ ಇತರರು ಹಾಜರಿದ್ದರು.

error: Content is protected !!