ಬೇತೂರು, ಕನಗೊಂಡನಹಳ್ಳಿ ಹಾಗೂ ಕುಕ್ಕುವಾಡ ಗ್ರಾಮ ಪಂಚಾಯ್ತಿಗಳ ಸದಸ್ಯರ ಭವಿಷ್ಯ ನಿರ್ಧಾರ
ದಾವಣಗೆರೆ, ಮಾ. 31 – ತಾಲ್ಲೂಕಿನ ಬೇತೂರು, ಕನಗೊಂಡನಹಳ್ಳಿ ಹಾಗೂ ಕುಕ್ಕುವಾಡ ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರದಂದು ಪ್ರಕಟವಾಗಿದೆ. ಕಳೆದ ಸೋಮವಾರ ಚುನಾವಣೆ ನಡೆದಿತ್ತು.
ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತಗಳ ಎಣಿಕೆ ನಡೆಯಿತು. ಮೂರು ಗ್ರಾಮ ಪಂಚಾಯ್ತಿಗಳ ಒಟ್ಟು 14 ಕ್ಷೇತ್ರಗಳ 45 ಸ್ಥಾನಗಳಿಗೆ ನಡೆದ ಚುನಾವಣೆಗೆ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿ ರಾತ್ರಿ 8 ಗಂಟೆಯವರೆಗೂ ಮುಂದುವರೆದಿತ್ತು.
ಕುಕ್ಕುವಾಡ ಗ್ರಾಮ ಪಂಚಾಯ್ತಿಯ ಕುಕ್ಕುವಾಡ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಲಕ್ಷ್ಮಮ್ಮ ವೆಂಕಟೇಶ್ – ಎಸ್.ಸಿ. ಮಹಿಳೆ (199 ಮತ), ಕೆ.ಎಂ. ಶಿವನಗೌಡ – ಹಿಂದುಳಿದ ಬ ವರ್ಗ (205), ಕೆ. ಶ್ರೀನಿವಾಸ – ಸಾಮಾನ್ಯ (242) ಆಯ್ಕೆಯಾಗಿದ್ದಾರೆ.
ಕುಕ್ಕುವಾಡ – 2 ಕ್ಷೇತ್ರದಿಂದ ನಡೆದ ಚುನಾವಣೆಗೆ ಕೆ.ಎಂ. ನಯಾಜ್ ಹಿಂದುಳಿದ ಅ ವರ್ಗ (276), ಸೌಭಾಗ್ಯಮ್ಮ – ಸಾಮಾನ್ಯ ಮಹಿಳೆ (634), ಪರಮೇಶ್ವರಪ್ಪ – ಸಾಮಾನ್ಯ(512) ಆಯ್ಕೆಯಾಗಿದ್ದಾರೆ.
ಕುಕ್ಕುವಾಡದ ಹೊನ್ನಮರಡಿ ಕ್ಷೇತ್ರದಿಂದ ಕೆ.ಎಂ. ಸುಧಾ- ಎಸ್.ಟಿ. ಮಹಿಳೆ (494), ಮಂಜುಳ ವೈ. – ಸಾಮಾನ್ಯ ಮಹಿಳೆ (352) ಹಾಗೂ ಪಿ.ಕೆ. ಸುನೀಲ್ ಕುಮಾರ್ – ಸಾಮಾನ್ಯ (530) ಆಯ್ಕೆಯಾಗಿದ್ದಾರೆ.
ಕುಕ್ಕುವಾಡದ ನಾಗರಸನಹಳ್ಳಿ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಎನ್.ಎಸ್. ಪ್ರದೀಪ್ – ಅನುಸೂಚಿತ ಜಾತಿ (281) ಹಾಗೂ ಲಕ್ಷ್ಮಿ ಬಿ.ಹೆಚ್. ಶಂಕರಾಚಾರ್ ಹಿಂದುಳಿದ ಅ ವರ್ಗ (416) ಆಯ್ಕೆಯಾಗಿದ್ದಾರೆ.
ಬೇತೂರು ಗ್ರಾಮ ಪಂಚಾಯ್ತಿಯ ಬೇತೂರು – 1 ಕ್ಷೇತ್ರದಲ್ಲಿ ಚಂದ್ರಪ್ಪ – ಹಿಂದುಳಿದ ಅ ವರ್ಗ (446), ಸೌಭಾಗ್ಯ – ಸಾಮಾನ್ಯ ಮಹಿಳೆ (515) ಹಾಗೂ ಎಂ.ಎಸ್. ಮಂಜುನಾಥ – ಸಾಮಾನ್ಯ (543). ಬೇತೂರು – 2 ಕ್ಷೇತ್ರದಲ್ಲಿ ಅಂಜಮ್ಮ – ಎಸ್ಸಿ ಮಹಿಳೆ (428), ಜಯ್ಯಮ್ಮ – ಸಾಮಾನ್ಯ ಮಹಿಳೆ (459) ಹಾಗೂ ಬಿ. ಶಿವಕುಮಾರ – ಸಾಮಾನ್ಯ (526) ಗೆದ್ದಿದ್ದಾರೆ.
ಬೇತೂರು – 3 ಕ್ಷೇತ್ರದಲ್ಲಿ ಶಾಂತಮ್ಮ – ಎಸ್.ಟಿ. ಮಹಿಳೆ (468), ಎ. ಲತಾ – ಹಿಂದುಳಿದ ಅ ವರ್ಗ ಮಹಿಳೆ (441), ಕೆ.ಸಿ. ಸುಮ – ಸಾಮಾನ್ಯ ಮಹಿಳೆ (543), ಹೆಚ್.ಎಸ್. ಚೇತನಕುಮಾರ – ಸಾಮಾನ್ಯ (581) ಗೆದ್ದಿದ್ದಾರೆ.
ಬಿ. ಕಲ್ಪನಹಳ್ಳಿಯಲ್ಲಿ ಪರಮೇಶ್ವರಪ್ಪ – ಎಸ್.ಸಿ. (342), ಜಿ.ಬಿ. ಬಸವರಾಜ – ಎಸ್.ಟಿ. (419), ಶಾಂತಮ್ಮ – ಸಾಮಾನ್ಯ ಮಹಿಳೆ (524), ಕೆ.ಎಂ. ರೇವಣಸಿದ್ದಪ್ಪ – ಸಾಮಾನ್ಯ (629) ಗೆದ್ದಿದ್ದಾರೆ.
ಬಿ. ಚಿತ್ತಾನಹಳ್ಳಿಯಲ್ಲಿ ಚೌಡಮ್ಮ – ಎಸ್.ಸಿ. ಮಹಿಳೆ (314), ಟಿ. ರೇಣುಕಮ್ಮ – ಎಸ್.ಟಿ. ಮಹಿಳೆ (311), ಜಿ.ಎನ್. ಹುಚ್ಚಪ್ಪ – ಸಾಮಾನ್ಯ (435).
ಕನಗೊಂಡನಹಳ್ಳಿ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಕನಗೊಂಡನಹಳ್ಳಿ ಕ್ಷೇತ್ರದಿಂದ ಗಂಗಮ್ಮ – ಎಸ್.ಸಿ. ಮಹಿಳೆ (556), ಕೆ.ಆರ್. ಗಮೇಶ – ಬಿಸಿಎಂಎ (581), ಎಂ.ವಿ. ಗೀತಮ್ಮ – ಸಾಮಾನ್ಯ ಮಹಿಳೆ (611), ಕೆ.ಹೆಚ್. ಬಸವರಾಜಪ್ಪ – ಸಾಮಾನ್ಯ (532).
ಬಲ್ಲೂರು ಕ್ಷೇತ್ರದಿಂದ ಸವಿತ ಆರ್. – ಬಿ.ಸಿ.ಎಂ. ಎ – ಮಹಿಳೆ (563), ಶೈಲಜ – ಬಿಸಿಎಂ – ಬಿ ಮಹಿಳೆ (437), ಮಹೇಶ್ವರಪ್ಪ ರೆಡ್ಡಿ – ಸಾಮಾನ್ಯ (623), ಕೆ. ವಿರೂಪಾಕ್ಷಪ್ಪ – ಸಾಮಾನ್ಯ (477) ಗೆದ್ದಿದ್ದಾರೆ.
ಕೊಳೇನಹಳ್ಳಿ ಚುನಾವಣಾ ಕ್ಷೇತ್ರದಿಂದ ಎಂ. ಹಾಲಮ್ಮ – ಎಸ್.ಟಿ. ಮಹಿಳೆ (326), ಜಲಜಾಕ್ಷಮ್ಮ – ಸಾಮಾನ್ಯ ಮಹಿಳೆ (589), ನಾಗರಾಜ ಯು. ಅಮತಿ – ಸಾಮಾನ್ಯ (503) ಆಯ್ಕೆಯಾಗಿದ್ದಾರೆ. ಗಂಗಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಡಗನಹಳ್ಳಿ ಕ್ಷೇತ್ರದಿಂದ ಜಿ.ಎಂ. ಬಸವರಾಜ – ಬಿಸಿಎಂಎ (201) ಹಾಗೂ ಎಂ.ಬಿ. ಗುತ್ಯಪ್ಪ – ಸಾಮಾನ್ಯ (197) ಆಯ್ಕೆಯಾಗಿದ್ದಾರೆ.