ಹರಪನಹಳ್ಳಿ : ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಕರೆ

ವೀರಭದ್ರಪ್ಪ ಬಳ್ಳೊಳ್ಳಿ 

ಹರಪನಹಳ್ಳಿ, ಜ.25- ಶಿಕ್ಷಣ ಇಲಾಖೆ ಜಾರಿಗೊಳಿಸುತ್ತಿರುವ ಹೊಸ ಹೊಸ ಯೋಜನೆಗಳನ್ನು ಬಳಸಿ ಕೊಂಡು ಮಕ್ಕಳಲ್ಲಿರುವ ಪ್ರತಿಭೆಗ ಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಮಾಡ್ಲಗೇರಿ ಕ್ಲಸ್ಟರ್ ಸಂಪ ನ್ಮೂಲ ವ್ಯಕ್ತಿ  ವೀರಭದ್ರಪ್ಪ ಬಳ್ಳೊಳ್ಳಿ ಶಿಕ್ಷಕರಿಗೆ ಸಲಹೆ ನೀಡಿದರು.

ತಾಲ್ಲೂಕಿನ  ಕಾನಹಳ್ಳಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಶಿಕ್ಷಣ ಇಲಾಖೆ ಕೈಗೊಂಡ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾ ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಜೊತೆಗೆ ಸಾರ್ವಜನಿಕ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. 

ಬಡ್ತಿ ಮುಖ್ಯ ಶಿಕ್ಷಕಿ ಲಕ್ಷ್ಮವ್ವ ರಂಗಣ್ಣನವರ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮಹತ್ವದ್ದು. ಶಿಕ್ಷಕರ ಜೊತೆಗೆ ಗ್ರಾಮಸ್ಥರ ಸಹಕಾರವಿದ್ದರೆ ಶೈಕ್ಷಣಿಕ ಅಭಿವೃದ್ಧಿ ಜೊತೆಗೆ ಮೂಲ ಸೌಲಭ್ಯ ಸಹ ಒದಗುತ್ತದೆ ಎಂದು ಹೇಳಿದರು.

 ಬಂಡ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಡಿ.ರಾಮಣ್ಣ ಅಪೌಷ್ಟಿಕತೆ ಬಗ್ಗೆ ಮಾಹಿತಿ ನೀಡಿದರು. ಮುಖಂಡ ಮಾಗಳದ ರಾಮಕೃಷ್ಣ ಮಾತನಾಡಿದರು. ಅಗ್ರಹಾರದ ಷಣ್ಮುಖಪ್ಪ ಅವರು 25 ಸಾವಿರ ರೂ.ದೇಣಿಗೆಯನ್ನು ಶಾಲಾಭಿವೃದ್ಧಿಗೆ ನೀಡುವುದಾಗಿ ಭರವಸೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಾನಹಳ್ಳಿ ರುದ್ರಪ್ಪ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಕೆ. ಪರಸಪ್ಪ, ಅಗ್ರಹಾರದ ವೀರಪ್ಪಜ್ಜ, ಗ್ರಾಪಂ ಸದಸ್ಯರುಗಳಾದ ಕೊಳಚಿ ನಾಗರಾಜ, ಹೆಚ್. ಉಚ್ಚೆಂಗೆಪ್ಪ, ಮಾಗಳದ ನಿರ್ಮಲ, ಮುತ್ತಿಗೆ ಪ್ರಕಾಶ, ಹಿರಿಯ ಶಿಕ್ಷಕಿ ಮಹಾಲಕ್ಷ್ಮಿ,  ಮುಖ್ಯ ಶಿಕ್ಷಕರಾದ ಬಿಕ್ಕಿಕಟ್ಟಿ ತಿಮ್ಮಣ್ಣ, ಮೆಹಬೂಬ ಬಡಗಿ, ಶಿಕ್ಷಕರಾದ ಜಯಪ್ರಕಾಶ, ಗೌರಮ್ಮ, ಕಬ್ಬಳ್ಳಿ  ಗೀತಾ, ಶಫಿ, ಗೌರಮ್ಮ, ಮಂ ಜುಳಾ, ಖಾಜಾಬೀ ಇನ್ನಿತರರಿದ್ದರು.

error: Content is protected !!