ದಾವಣಗೆರೆ, ಜ.23- ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ 901ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಜಿಲ್ಲಾ ಗಂಗಾಮತ ಸಮಾಜದ ಪ್ರಧಾನ ಕಾರ್ಯದರ್ಶಿ ಜೆ.ಉಮೇಶ್ ನೇತೃತ್ವದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಲಾಯಿತು.
ಗ್ರಾ.ಪಂ. ಪಿಡಿಓ ಕಾತ್ಯಾಯಿನಿ, ಸಿಬ್ಬಂದಿಗಳು ಮತ್ತು ಸದಸ್ಯರಾದ ವಿನುತ ಸುರೇಶ ಬಾಬು, ಎಂ.ಮಲ್ಲಿಕಾರ್ಜುನ್, ಆರ್.ದಿನೇಶ್, ರೇವಣಸಿದ್ದಪ್ಪ, ಎನ್.ಕೆ.ಲೀಲಾ, ರೇಣುಕಾ ಬಾಯಿ, ಶಾಂತಮ್ಮ, ಪ್ರಸನ್ನ ಡಿ., ಲಲಿತಮ್ಮ, ಜ್ಯೋತಿ ನಿರಂಜನ, ಹೊಳಿಯಪ್ಪರ ಬಸವರಾಜಪ್ಪ, ಮಂಜುನಾಥ ಎ.ಕೆ., ದೀಪಾ ಶಿವು, ಸಮಾಜದ ಮುಖಂಡರಾದ ಕೆ. ಶಿವಮೂರ್ತಿ, ಡಿ.ಎಂ. ವೀರೇಂದ್ರ ಪಾಟೀಲ್, ಡಿ.ಜಯ್ಯಪ್ಪ, ಎ.ಹೆಚ್. ಚನ್ನಬಸಪ್ಪ, ಜಿ.ಎ. ಮಂಜುನಾಥ್, ಗುಡ್ಡೇಶಪ್ಪ, ಪಿ.ಪ್ರಕಾಶ್, ಹೇಮಂತರಾಜ್, ರಾಯಪ್ಳ ಶಂಭಣ್ಣ ಈ ಸಂದರ್ಭದಲ್ಲಿದ್ದರು.