ಮಲೇಬೆನ್ನೂರಿನಲ್ಲಿ ದೇಣಿಗೆ ಸಂಗ್ರಹಕ್ಕೆ ಚಾಲನೆ

ಮಲೇಬೆನ್ನೂರು, ಜ.24- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪಟ್ಟಣದಲ್ಲಿ ಭಾನುವಾರ ದೇಣಿಗೆ ಸಂಗ್ರಹ ಕಾರ್ಯವನ್ನು ಶ್ರೀ ಗಂಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು.

ಪುರಸಭೆ ಸದಸ್ಯ ಬಿ. ಸುರೇಶ್‌, ಮುದೇಗೌಡ್ರ ತಿಪ್ಪೇಶ್‌, ಕೆ.ಜಿ. ವೀರನಗೌಡ, ಬಿ. ಚಿದಾನಂದಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ. ವೀರಯ್ಯ, ಎನ್‌. ಶಿವನಗೌಡ, ಕೆ.ಜಿ. ಲೋಕೇಶ್‌, ಹೆಚ್‌.ಎಸ್‌. ವೀರಭದ್ರಯ್ಯ, ಹಳ್ಳಳ್ಳಿ ಮಹಾಂತಯ್ಯ, ಪಕ್ಕೀರ್‌ಸಾಬ್‌, ಸಿದ್ದೇಶ್‌, ಎನ್‌.ಕೆ. ರಾಜೀವ್ ಸೇರಿದಂತೆ ಅನೇಕರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದರು. ಭಾನುವಾರ 59,750 ರೂ. ದೇಣಿಗೆ ಸಂಗ್ರಹವಾಗಿದ್ದು, ಸೋಮವಾರ ಸಂಗ್ರಹ ಮುಂದುವರೆಯಲಿದೆ ಎಂದು ಪಿ.ಆರ್‌. ರಾಜು ತಿಳಿಸಿದ್ದಾರೆ.

ಮಾಜಿ ಶಾಸಕ ಬಿ.ಪಿ. ಹರೀಶ್‌, ತಾ., ಗ್ರಾ, ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಪಾನಿಪೂರಿ ರಂಗನಾಥ್‌, ಬೆಣ್ಣೆಹಳ್ಳಿ ಬಸವರಾಜ್‌, ಬಿ. ಚಂದ್ರಪ್ಪ, ಬಿ. ಮಂಜುನಾಥ್‌, ಗೌಡ್ರ ಮಂಜಣ್ಣ ಸೇರಿದಂತೆ ಇನ್ನೂ ಅನೇಕರು ದೇಣಿಗೆ ಸಂಗ್ರಹದಲ್ಲಿ ಭಾಗವಹಿಸಿದ್ದರು.

error: Content is protected !!