ಧಾರವಾಡದ ಬಳಿಯ ರಸ್ತೆ ಅಪಘಾತದಲ್ಲಿ ಮಡಿದ ಎಲ್ಲರ ಸಾಮೂಹಿಕ ಪುಣ್ಯತಿಥಿ

ಧಾರವಾಡ, ಜ.24- ಹುಬ್ಬಳ್ಳಿ – ಧಾರವಾಡ ಬೈಪಾಸ್‌ ರಸ್ತೆಯ ಇಟಿಗಟ್ಟಿ ಬಳಿ ಇದೇ ದಿನಾಂಕ 15 ರಂದು ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ 11 ಜನರಿಗೆ ಕೆಲಗೇರಿ ಹಾಗೂ ಸುತ್ತಲಿನ ಬಡಾವಣೆಗಳ ಗ್ರಾಮಸ್ಥರು ನಿನ್ನೆ ಸಾಮೂಹಿಕ ಪುಣ್ಯತಿಥಿ ಆಚರಿಸುವುದರ ಮೂಲಕ ಗಮನ ಸೆಳೆದರು.

ಅಪಘಾತ ಸಂಭವಿಸಿ ಶನಿವಾರಕ್ಕೆ ಒಂಬತ್ತು ದಿನ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಪುಣ್ಯತಿಥಿ ನೆರವೇರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಕೆಲಗೇರಿ ಬೈಪಾಸ್‌ ರಸ್ತೆಯ ಬದಿ ಮೃತರ ಭಾವಚಿತ್ರದೊಂದಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ನೈವೇದ್ಯ ಮಾಡಿ ಪುಣ್ಯತಿಥಿ ಸಂದರ್ಭದಲ್ಲಿ ನಡೆಯುವ ಎಲ್ಲ ರೀತಿಯ ಪೂಜೆಗಳನ್ನು ಮಾಡಲಾಯಿತು.

ಈ ರಸ್ತೆಯಲ್ಲಿ ಮುಂದೆ ಅಪಘಾತಗಳು ಆಗದಂತೆ ಶಾಂತಿ ಮಾಡಲಾಗಿದೆ.ಜೊತೆಗೆ ಸರ್ಕಾರ ಎಚ್ಚೆತ್ತುಕೊಂಡು ಇನ್ನಾದರೂ ಈ ರಸ್ತೆ ಅಗಲೀಕರಣ ಕಾರ್ಯ ಮಾಡಲಿ ಎನ್ನುವುದು ನಮ್ಮ ಉದ್ದೇಶ ಎಂದು ಕೆಲಗೇರಿಯ ಗ್ರಾಮಸ್ಥ ಮಂಜುನಾಥ ಹೇಳಿದರು. 

ಬಸವರಾಜ ಕೊರವರ, ರುದ್ರಯ್ಯ ಕಲ್ಮಠ, ನಾಗೇಶ್‌ ತಲವಾಯಿ, ಬಸಯ್ಯ ಹಿರೇಮಠ, ಗಿರೀಶ್‌ ಪೂಜಾರ್‌, ಮಲ್ಲಯ್ಯ ಹೊಂಗಲಮಠ ಇದ್ದರು.

error: Content is protected !!