ಗಾಜಿನ ಮನೆಯಲ್ಲಿ ಸಂಚಾರ ನಿಯಮಗಳ ಜನಜಾಗೃತಿ

ದಾವಣಗೆರೆ, ಜ.24- ನಗರದ ಗಾಜಿನ ಮನೆ ಆವರಣದಲ್ಲಿ  ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಜಾಗೃತಿ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯಿಂದ ಆಗುವ ತೊಂದರೆಗಳು ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡನೆ ಬಗ್ಗೆ ಪೊಲೀಸ್ ತಂಡದಿಂದ ಜನಜಾಗೃತಿ ಮೂಡಿಸಲಾಯಿತು.  ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜೀವ್, ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಟ್ರಾಫಿಕ್ ಪೊಲೀಸ್ ನಿರೀಕ್ಷಕ ತಿಮ್ಮಣ್ಣ, ಸಂಚಾರ ಠಾಣೆಯ ಪಿಎಸೈಗಳಾದ ಇಮ್ರಾನ್, ಶ್ರೀಧರ್, ಜಯಶೀಲ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು

error: Content is protected !!