ಹರಪನಹಳ್ಳಿ, ಜ.22- ಪಟ್ಟಣದ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ ಮುತ್ತಿಗಿಯ ಸಾಬಳ್ಳಿ ಜಂಬಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪಿ.ಕೆ. ಮಹದೇವಪ್ಪ ರಾಜೀನಾಮೆ ನೀಡಿದ ಪ್ರಯುಕ್ತ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸಾಬಳ್ಳಿ ಜಂಬಣ್ಣನವರ ಆಯ್ಕೆ ಘೋಷಣೆಯಾಗುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತ ಪಡಿಸಿದರು.
ಈ ವೇಳೆ ನೀಲಗುಂದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್, ಯುವ ಮುಖಂಡ ಪಿ.ಟಿ.ಭರತ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರುಗಳಾದ ಪಿ.ಎಲ್. ಪೋಮ್ಯ ನಾಯ್ಕ, ಪಿ.ಬಿ. ಗೌಡ, ಪುರಸಭೆ ಸದಸ್ಯರುಗಳಾದ ಲಾಟಿ ದಾದಾಪೀರ್, ಜಾಕೀರ್ ಸರ್ಖಾವಸ್, ಮುಖಂಡರಾದ ಮತ್ತಿಹಳ್ಳಿ ಅಜ್ಜಣ್ಣ, ಶಶಿಧರ್ ಪೂಜಾರ್, ಎಂ.ಟಿ. ಬಸವನಗೌಡ, ಪೂಜಾರ್ ಅರುಣಕುಮಾರ್, ಆಲಮರಸಿಕೇರಿ ಪರಶುರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.