ಹರಿಹರ, ಜ.21- ನಗರದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಒಂದು ವಾರದೊಳಗೆ ಬೇಧಿಸಿರುವ ಹರಿಹರ ನಗರ ಪೊಲೀಸರು ಕಳ್ಳನನ್ನು ಬಂಧಿಸಿ, ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ವಿಜಯನಗರ ಬಡಾವಣೆಯ 2ನೇ ಮೇನ್ 7ನೇ ಕ್ರಾಸ್ ನಲ್ಲಿ ಇದೇ ದಿನಾಂಕ 16 ರ ಬೆಳಗಿನ ಜಾವ ಶಕುಂತಲಾ ಬಾಯಿ ಎಂಬುವರ ಮನೆ ಬೀಗ ಒಡೆದು ಕಳ್ಳತನವಾಗಿತ್ತು.
ಪೊಲೀಸ್ ಉಪ ನಿರೀಕ್ಷಕ ಮಂಜುನಾಥ ಎಸ್. ಕಲ್ಲೇದೇವರ ಮತ್ತು ಬೆರಳು ಮುದ್ರೆ ತಜ್ಞರು ಬೆರಳು ಮುದ್ರೆ ಘಟಕ ಮತ್ತು ಸಿಬ್ಬಂದಿಯವರು ಕಳ್ಳತನ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೃತ್ಯ ನಡೆದ ಸ್ಥಳದಲ್ಲಿ ಆರೋಪಿತನ ಬೆರಳು ಮುದ್ರೆಯನ್ನು ಪತ್ತೆ ಮಾಡಿದ್ದರು. ನಂತರ ಎಎಸ್ಪಿ ರಾಜೀವ್, ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ಸಿಪಿಐ ಸತೀಶ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐಗಳಾದ ಲತಾ ವಿ. ತಾಳೇಕರ್ ಹಾಗೂ ಸುನೀಲ ಬಿ. ತೇಲಿ ಮತ್ತು ಸಿಬ್ಬಂದಿಗಳಾದ ಯಾಸೀನ್ ವುಲ್ಲಾ, ನಾಗರಾಜ ಸುಣಗಾರ, ದ್ವಾರಕೀಶ, ಶಿವರಾಜ, ಎಸ್.ಬಿ. ಸಿದ್ದರಾಜು, ಎಲ್. ತಿಪ್ಪೇಸ್ವಾಮಿ, ಹನುಮಂತಪ್ಪ ಗೋಪನಾಳ ಒಳಗೊಂಡ ತಂಡವು ಇಂದು ತೆಲಗಿ ಗ್ರಾಮದ ಬಳಿ ಹರಪನಹಳ್ಳಿ ತಾಲ್ಲೂಕಿನ ಇಂಗಳಗೊಂದಿ ಗ್ರಾಮದ ಭರಮಪ್ಪ ಅಲಿಯಾಸ್ ಗೊಣ್ಣೇರ ಭರಮಪ್ಪನನ್ನು ಬಂಧಿಸಲಾಗಿದೆ.
38.90 ಗ್ರಾಂ ತೂಕದ ಬಂಗಾರದ ಅವಲಕ್ಕಿ ಸರ, 250 ಗ್ರಾಂ ತೂಕದ ಯಲ್ಲಮ್ಮ ದೇವರ ಬೆಳ್ಳಿ ಮುಖ ವಾಡ ಒಟ್ಟು 1 ಲಕ್ಷದ 17 ಸಾವಿರ ಮೌಲ್ಯದ ಚಿನ್ನಾಭ ರಣಗಳನ್ನು ಪೊಲೀಸುರ ವಶಪಡಿಸಿಕೊಂಡಿದ್ದಾರೆ.