ದಾವಣಗೆರೆ, ಜ.21 – ತಾಲ್ಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ಹಜರತ್ ಸೈಯದ್ ಸಾದತ್ ಷಾವಲಿರವರ 65ನೇ ಉರುಸ್ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಉರುಸ್ನಲ್ಲಿ ಭಾಗವಹಿಸಿದ್ದರು. ಉರುಸ್ ಸಮಿತಿಯಿಂದ ಶಾಸಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಬಸವರಾಜಪ್ಪ, ಅನ್ವರ್ ಬಾಷಾ, ಟಿ.ಹೆಚ್.ಕಲ್ಲಪ್ಪ, ರಿಯಾಜ್ ಅಹ್ಮದ್, ಬಿ.ಹನುಮಂತಪ್ಪ, ಕರೀಮ್ ಸಾಬ್, ಎಸ್.ಜೆ.ಸತೀಶ್ ಮತ್ತಿತರರು ಹಾಜರಿದ್ದರು.
December 28, 2024