ದಾವಣಗೆರೆ, ಜ.20 – ಮಹಾಯೋಗಿ ವೇಮನರ ಸಾಹಿತ್ಯ ಹೇಮರೆಡ್ಡಿ ಮಲ್ಲಮ್ಮನವರ ಆದರ್ಶ ಬದುಕು ಹಾಗೂ ರೆಡ್ಡಿ ಸಮಾಜದ ಕುರಿತಾದ ಲಿಂಗಾರೆಡ್ಡಿ ಆಲೂರ ಅವರ ಸಂಪಾದಕತ್ವದ `ರೆಡ್ಡಿ ಬಳಗ’ ಮಾಸ ಪತ್ರಿಕೆಯನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಇಂದು ಬಿಡುಗಡೆಗೊಳಿಸಿದರು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ರೆಡ್ಡಿ ಸಮಾಜದ ಮುಖಂಡರಾದ ಡಾ.ಕೊಟ್ರೇಶ್ ಕಂಚಿಕೇರಿ, ಲೋಹಿತ್, ಸಣ್ಣಪ್ಪ ಅಜ್ಜಮ್ಮನವರ, ವೇಮರಡ್ಡಿ, ಹರ್ಷ ಪಾಟೀಲ್, ಮಲ್ಲಿಕಾರ್ಜುನ ಬಾವಿಕಟ್ಟಿ, ಶ್ರೀನಿವಾಸ್ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
February 26, 2025