ಮಲೇಬೆನ್ನೂರಿನಲ್ಲಿ 69 ಜನರಿಗೆ ಲಸಿಕೆ

ಮಲೇಬೆನ್ನೂರು, ಜ.18 – ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ 69 ಜನರಿಗೆ ಕೋವಿಡ್ ಲಸಿಕೆ ನೀಡಲಾಯಿತು. ನಾಲ್ವರು ವೈದ್ಯರಿಗೆ, 14 ಜನ ಆರೋಗ್ಯ ಕಾರ್ಯಕರ್ತರಿಗೆ 8 ಜನ ಗ್ರೂಪ್ ಡಿ ನೌಕರರಿಗೆ, ಓರ್ವ ವಾಹನ ಚಾಲಕನಿಗೆ ಮತ್ತು 30 ಆಶಾ ಹಾಗೂ 10 ಜನ ಅಂಗನವಾಡಿ ಕಾರ್ಯಕರ್ತರಿಗೆ ಲಸಿಕೆ ನೀಡಿ, 30 ನಿಮಿಷ ನೇರ ನಿಗಾವಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಲೇ ರಿಯಾ ಅಧಿಕಾರಿಗಳೂ ಆದ ತಾ.ನೋಡಲ್ ಅಧಿಕಾರಿ ಡಾ.ನಟರಾಜ್ ಅವರು, ಈಗ ಲಸಿಕೆ ಪಡೆದು ಕೊಂಡವರು 28 ದಿನಗಳ ನಂತರ 2ನೇ ಡೋಜ್ ಪಡೆದುಕೊಳ್ಳಬೇಕು. ಸಣ್ಣ-ಪುಟ್ಟ ತೊಂದರೆ ಕಂಡು ಬಂದರೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು.

ಜಿಲ್ಲೆಯಲ್ಲಿ ಇದುವರೆಗೆ ಲಸಿಕೆ ಪಡೆದುಕೊಂಡವರ ಪೈಕಿ 3-4 ಜನರಿಗೆ ಜ್ವರ ಮೈ-ಕೈ ನೋವಿನಂತಹ ಸಣ್ಣ-ಪುಟ್ಟ ತೊಂದರೆ ಬಿಟ್ಟರೆ ಬೇರೆ ಯಾವುದೇ ಅಡ್ಡ ಪರಿಣಾಮ ಆಗಿಲ್ಲ. ಹೆಮ್ಮಾರಿ ಕೊರೊನಾ ಹೊಡೆದೋಡಿಸಲು ಭಯ ಬಿಟ್ಟು ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದ ಡಾ. ನಟರಾಜ್ ಅವರು, ಮಂಗಳವಾರ ಹರಿಹರದ ಸಾರ್ವಜನಿಕ ಆಸ್ಪತ್ರೆಯಲ್ಲಿ 200 ಅಂಗನವಾಡಿ ಕಾರ್ಯಕರ್ತರಿಗೆ ಈ ಲಸಿಕೆ ನೀಡಲಾಗುವುದೆಂದರು. ಟಿಹೆಚ್‍ಓ ಡಾ. ಚಂದ್ರಮೋಹನ್, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಪುರಸಭೆ ಅಧ್ಯಕ್ಷೆ ನಾಹೀದಾ ಅಂಜುಂ, ಉಪಾಧ್ಯಕ್ಷೆ ಆಂಜನಮ್ಮ , ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಉಪ ತಹಶೀಲ್ದಾರ್ ಆರ್.ರವಿ, ಹಿರಿಯ ಆರೋಗ್ಯ ಸಹಾಯಕ ಎಂ.ಉಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಎಸ್.ಹೆಚ್‍.ಪಾಟೀಲ್, ಕಿರಿಯ ಆರೋಗ್ಯ ಸಹಾಯಕ ದಾದಾಪೀರ್ ಈ ವೇಳೆ ಹಾಜರಿದ್ದರು.

error: Content is protected !!