ರಾಣೇಬೆನ್ನೂರು, ಜ.16- ವಕೀಲರಿಗೆ ಹೆದ್ದಾರಿ ಶುಲ್ಕದಲ್ಲಿ ರಿಯಾಯಿತಿ ನೀಡುವಂತೆ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ ನೇತೃತ್ವದಲ್ಲಿ ಚಳಗೇರಿ ಹಾಗೂ ಹೆಡಿಯಾಲದ ಬಳಿ ಇರುವ ಟೋಲ್ ಗುತ್ತಿಗೆದಾರ ಕಂಪನಿಗಳಿಗೆ ಮನವಿ ಮಾಡಲಾಯಿತು.
ರಾಣೇಬೆನ್ನೂರಿನ ವಕೀಲರು ದಾವಣಗೆರೆ ಹಾಗೂ ಹಿರೇಕೆರೂರು ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿದ್ದು, ಸಂಬಂಧಿಸಿದ ಕಾರ್ಯಗಳಿಗೆ ಪ್ರತಿದಿನ ಸಂಚರಿಸುತ್ತಿರುತ್ತಾರೆ. ಕೆಲ ಸಂದರ್ಭಗಳಲ್ಲಿ ದಿನಕ್ಕೆ ಎರಡು, ಮೂರು ಬಾರಿ ಸಂಚರಿಸುವ ಅವಶ್ಯಕತೆ ಇರುತ್ತದೆ. ಪ್ರತಿಬಾರಿ ಶುಲ್ಕ ನೀಡಲು ತೊಂದರೆ ಆಗಲಿದ್ದು, ಸಂಘದ ಗುರುತಿನ ಚೀಟಿ ಹೊಂದಿದ ವಕೀಲರಿಗೆ ಶುಲ್ಕದಲ್ಲಿ ರಿಯಾಯ್ತಿ ನೀಡುವಂತೆ ಮನವಿ ಮಾಡಲಾಯಿತು.
ಸಂಘದ ಪದಾಧಿಕಾರಿಗಳಾದ ಕುಮಾರ ಮಡಿವಾಳರ, ಮಲ್ಲಿಕಾರ್ಜುನ ಹರವಿ, ವೇದಮೂರ್ತಿ ಹಿರೇಮಠ, ಸಂಜೀವಕುಮಾರ ಚನ್ನಗೌಡ್ರ, ಮಂಜನಗೌಡ ಹೊಸಗೌಡ್ರ, ರಾಜು ಬಿದರಿ, ನಬಿ ಹಿರೇಬಿದರಿ, ಸವಿತಾ ಮೊಹರೆ, ಪ್ರಶಾಂತ ಯಕ್ಕನಳ್ಳಿ, ಪ್ರಭು ಶಿರಗಂಬಿ ಇನ್ನಿತರರು ಭಾಗವಹಿಸಿದ್ದರು.