ಕೊಟ್ಟೂರು, ಜ.14 – ಜಯಂತಿಗಳು ಒಂದು ದಿನದ ಆಚರಣೆಗೆ ಮಾತ್ರ ನೀಮಿತವಾಗದೇ ನಿತ್ಯ ಜೀವನಕ್ಕೆ ಮಾರ್ಗದರ್ಶನವಾಗಬೇಕು ಹಾಗೂ ಅವರು ನೀಡಿದ ಸಂದೇಶ ಪಾಲಿಸಬೇಕು. ಆಗಲೇ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಹಶೀಲ್ದಾರ್ ಜಿ. ಅನಿಲ್ ಕುಮಾರ್ ಅವರು ತಿಳಿಸಿದರು.
ತಾಲ್ಲೂಕು ಕಛೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಒಬ್ಬರ ಮನವ ನೋಯಿಸಿ ಒಬ್ಬರ ಮನೆಯ ಘಾತವ ಮಾಡಿ ಗಂಗೆಯ ಮುಳುಗಿದಡೇನಾವುದಯ್ಯ’ ಎಂದು ಹೇಳಿರುವ ಸಿದ್ದರಾಮೇಶ್ವ ರರು, ಇನ್ನೊಬ್ಬರ ಮನವ ನೋ ಯಿಸದಂತೆ ನಡೆಯಬೇ ಕೆಂದು ನೀಡಿರುವ ಸಂದೇಶ ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಯುವ ಮುಖಂಡ ಇಂದ್ರ ಜಿತ್ ಮಾತನಾಡಿ, ಭೋವಿ ಜನಾಂಗದವರು ಶಿಕ್ಷಣವಂತರಾಗಬೇಕು. ಆ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂಚೂಣಿಗೆ ಬರಬೇಕೆಂದರು
ವೇದಿಕೆಯಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪಿ.ಎಚ್.ಆರ್ ರಾಘವೇಂದ್ರ ಗ್ರಾ.ಪಂ ಸದಸ್ಯರಾದ ಡಿ. ನಾಗೇಶ್ ಮುಖಂಡರಾದ ದೊಡ್ಡಮನಿ ಚೌಡಪ್ಪ, ರವಿಕುಮಾರ್, ಶಿರಸ್ತೇದಾರರಾದ ಲೀಲಾ, ಕಂದಾಯ ನಿರೀಕ್ಷಕ ಹಾಲಸ್ವಾಮಿ, ರವಿ, ಸುನೀತಾ, ಮಂಜುನಾಥ್ ಇದ್ದರು. ಸಿ.ಮ. ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು.