ಸುಕ್ಷೇತ್ರ ಉಕ್ಕಡಗಾತ್ರಿಯ ತುಂಗಭದ್ರಾ ನದಿ ತಟದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಜನರು ಗುರುವಾರ ಸಂಭ್ರಮದಿಂದ ಆಚರಿಸಿದರು. ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದ ಜನರು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಗಂಗಾ ಪೂಜೆ ನೆರವೇರಿಸಿದರು. ನಂತರ ಪವಾಡ ಪುರುಷ ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯನ ದರ್ಶನ ಪಡೆದರು. ಮನೆಯಿಂದ ತಯಾರು ಮಾಡಿಕೊಂಡು ಬಂದಿದ್ದ ರೊಟ್ಟಿ, ಬುತ್ತಿ, ಚಟ್ನಿ, ಪಲ್ಯ, ಪಾಯಿಸ, ಹೋಳಿಗೆ ಸೇರಿದಂತೆ ಬಗೆ ಬಗೆಯ ತಿನಿಸುಗಳನ್ನು ನದಿ ದಡದಲ್ಲಿ ಒಟ್ಟಾಗಿ ಕುಳಿತುಕೊಂಡು ಸವಿದು ಸಂಭ್ರಮಿಸಿದರು.
November 25, 2024