ಮಲೇಬೆನ್ನೂರಿನಲ್ಲಿ ಕೋವಿಡ್ ಲಸಿಕೆಗೆ ವ್ಯವಸ್ಥೆ : ಪರಿಶೀಲನೆ

ಮಲೇಬೆನ್ನೂರು ಜ.13 – ದೇಶದ್ಯಾಂತ ಇದೇ ದಿನಾಂಕ 16 ರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ನಟರಾಜ್ ಡಿಹೆಚ್‍ಓ ಡಾ. ಚಂದ್ರಮೋಹನ್ ಅವರು ಭೇಟಿ ನೀಡಿ ಕೋವಿಡ್ ಡ್ರೈರನ್ ಬಗ್ಗೆ ಪರಿಶೀಲಿಸಿದರು. ಮೊದಲ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವ್ಯಾಕ್ಸಿನ್ ನೀಡಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗುತ್ತಿದೆ.

ಹರಿಹರ ತಾಲ್ಲೂಕಿನಲ್ಲಿ ಹರಿಹರ, ಕೊಂಡಜ್ಜಿ, ಮಲೇಬೆನ್ನೂರು ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ದು ಮಲೇಬೆನ್ನೂರು ಕೇಂದ್ರದಲ್ಲಿ ಉಕ್ಕಡಗಾತ್ರಿ, ನಂದಿಗುಡಿ, ಕೊಕ್ಕನೂರು, ಭಾನುವಳ್ಳಿ, ಸಿರಿಗೆರೆ, ದೇವರಬೆಳಕೆರೆ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುವುದೆಂದು ಡಾ. ನಟರಾಜ ಪತ್ರಕರ್ತರಿಗೆ ತಿಳಿಸಿದರು. 

ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ, ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರಾಜು, ರುದ್ರಮ್ಮ, ಅವಿನಾಶ್ ಈ ವೇಳೆ ಹಾಜರಿದ್ದರು.

error: Content is protected !!