ಹಿಜಾಬ್ ಹೆಸರಲ್ಲಿ ರಾಜ್ಯದಲ್ಲಿನ ಬೆಳವಣಿಗೆ ನಿಲ್ಲಿಸಲು ಆಗ್ರಹ

ಹಿಜಾಬ್ ಹೆಸರಲ್ಲಿ ರಾಜ್ಯದಲ್ಲಿನ ಬೆಳವಣಿಗೆ ನಿಲ್ಲಿಸಲು ಆಗ್ರಹ - Janathavaniಮಹಿಳೆಯ ಏಕಾಂಗಿ ಹೋರಾಟ

ದಾವಣಗೆರೆ, ಮಾ.29- ಹಿಜಾಬ್ ಹೆಸರಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ, ಬುರ್ಖಾಧಾರಿ ಮುಸ್ಲಿಂ ಮಹಿಳೆಯೊಬ್ಬರು ತನ್ನ ಕೂಸಿನ ಸಮೇತ ನಗರದ ಅರಳಿ ಮರ ವೃತ್ತದ ಬಳಿ ಏಕಾಂಗಿಯಾಗಿ ನಡೆಸುತ್ತಿರುವ ಧರಣಿಯನ್ನು ಮುಂದುವರೆಸಿದ್ದಾರೆ.

ಜಾಸ್ಮಿನ್ ಬಾನು ಎಂಬ ಮಹಿಳೆ ತಮ್ಮ ವರ್ಷದ ಕೂಸಿನ ಸಮೇತ ಉರಿಯುವ ಬಿಸಿಲ ಝಳದ ಮಧ್ಯೆಯೂ ಏಕಾಂಗಿಯಾಗಿ ವಿನೂತನ ಮೌನ ಹೋರಾಟವನ್ನು ಆರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ.

`ನನ್ನುಡುಗೆ ನನ್ನ ಇಷ್ಟ’. ಅದನ್ನು ತಡೆಯಲು ಯಾರಿಗೂ ಅಧಿಕಾರವಿಲ್ಲವೆಂಬ ಕರಪತ್ರ ಸಮೇತ ಹೋರಾಟ ಆರಂಭಿಸಿರುವ ಮಹಿಳೆ, ಸಿಎಂ ಬಸವರಾಜ ಬೊಮ್ಮಾಯಿ ಕೇವಲ ಒಂದು ಕೋಮು, ಧರ್ಮ, ಪಂಗಡಕ್ಕೆ ಮಾತ್ರ ಸೀಮಿತರಲ್ಲ. ಹಿಜಾಬ್ ಹೆಸರಿನಲ್ಲಿ ನಡೆಯುತ್ತಿರುವ ಇತರೆ ಬೆಳವಣಿ ಗೆಗಳು ಮೊದಲು ನಿಲ್ಲಬೇಕು ಎಂದರು.

ಪ್ರತಿಯೊಂದು ಧರ್ಮೀಯರೂ ಬಾಳು ವಂತಹ ವಾತಾವರಣ ನಿರ್ಮಾಣವಾಗ ಬೇಕು. ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದಂತಹ ಚಟುವಟಿಕೆಗಳು, ವ್ಯಾಪಾರ ಮಾಡಲು ಅವ ಕಾಶ ನೀಡದಂತಹ ಘಟನೆಗಳನ್ನು ಮುಖ್ಯಮಂತ್ರಿಗಳು ಮೊದಲು ತಡೆಯ ಬೇಕು. ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಬಹಿಷ್ಕಾರದಂತಹ ಚಟುವ ಟಿಕೆಗಳು ನಡೆಯುತ್ತಿವೆ ಎಂದು ದೂರಿದರು. ವ್ಯಾಪಾರ ಬಹಿಷ್ಕಾರದ ಹೆಸರಿನಲ್ಲಿ ಬಡವರ ಶೋಷಣೆಯಾಗುತ್ತಿದೆ. ನಾವು ಸಂವಿಧಾನಬದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ನನ್ನ ದೇಶದಲ್ಲಿ ಶಾಂತಿ ವಾತಾವರಣ ಕದಡುವ ಪ್ರಯತ್ನದ ವಿರುದ್ಧ ನನ್ನ ಹೋರಾಟ, ಪ್ರತಿಭಟನೆ ಇದಾಗಿದೆ. ಇದು ಎಲ್ಲಿವರೆಗೆ ನಡೆಯುತ್ತದೋ ನಮಗೆ ಗೊತ್ತಿಲ್ಲ. ರಾಜ್ಯದಲ್ಲಿ ಶಾಂತಿ ನೆಲೆಸುವವರೆಗೂ ನನ್ನ ಪ್ರತಿಭಟನೆ ಎಂದು ಹೋರಾಟ ನಿರತ ಮಹಿಳೆ ಎಚ್ಚರಿಸಿದರು.

error: Content is protected !!