ಲೇಡಿಸ್ ಕ್ಲಬ್‌ನಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಮಾ.29- ದಾವಣಗೆರೆ ಲೇಡಿಸ್ ಕ್ಲಬ್, ರೋಟರಿ ಕ್ಲಬ್ ದಾವಣಗೆರೆ ದಕ್ಷಿಣ ಇವರ ಜಂಟಿ ಆಶ್ರಯದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಈಚೆಗೆ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಹಳೆಯ ಆಟಗಳನ್ನು ನಡೆಸಲಾಯಿತು.

 ಪೊಲೀಸ್ ಇಲಾಖೆಯ ಶಿಲ್ಪ, ಲತಾ, ಆರೋಗ್ಯ ಇಲಾಖೆಯ ಸುಜಾತ, ಯಾಸ್ಮಿನ್, ಸಾರಿಗೆ ಇಲಾಖೆಯ ಗೀತಾ, ಶಿಕ್ಷಣ ಇಲಾಖೆಯ ಬಾಲಮಣಿ ಅವರುಗಳನ್ನು  ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

83 ವರ್ಷದ ಶ್ರೀಮತಿ ಬಾಲಮಣಿ ಅವರು ಎಲ್ಲಾ ಆಟಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿದ್ದು, ದಾವಣಗೆರೆ ಲೇಡಿಸ್ ಕ್ಲಬ್‌ನ ಈ ವಿಶೇಷತೆ ಬಗ್ಗೆ ಬಾಲಮಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಲಬ್‌ ಸಂಸ್ಥಾಪಕರೂ, ವಕೀಲರೂ ಆದ ಶ್ರೀಮತಿ ಅಮೀರಾಬಾನು, ರೋಟರಿ ಕ್ಲಬ್ ಅಧ್ಯಕ್ಷರಾದ ಡಾ. ಸುಜೀತ್, ಲೇಡಿಸ್ ಕ್ಲಬ್‌ನ ಅಧ್ಯಕ್ಷರಾದ ವಿನೋದ, ಉಪಾಧ್ಯಕ್ಷರಾದ  ನಾಗರತ್ನ, ಪ್ರಧಾನ ಕಾರ್ಯದರ್ಶಿ ಚೇತನ್, ಸಂಧ್ಯಾರಾಣಿ, ಸದಸ್ಯೆಯರಾದ ಶಾರದ ಶೇಟ್, ರೇಣುಕಮ್ಮ, ವೀಣಾ, ಮಮತ, ಶಶಿ ಶಿವಯ್ಯ, ಕುಸುಮ ಉಪಸ್ಥಿತರಿದ್ದರು.

ವಿವಿಧ ಆಟಗಳ ವಿಜೇತರು : ಕೆರೆ-ದಡ : ಪುಷ್ಪಾ ಹಿಂಜಾರಪ್ಪ (ಪ್ರಥಮ), ಲೀಲಾ ಸುಭಾಷ್ (ದ್ವಿತೀಯ)

ಲಕ್ಕಿ ಆಟ :  ಸುಜಾತ ಬಿ.ಕೆ. (ಪ್ರಥಮ), ಅನ್ನಪೂರ್ಣ (ದ್ವಿತೀಯ), ಸಂಗೀತ ಎ.ಪಿ. (ತೃತೀಯ).

ಪಾಸಿಂಗ್ ದ ಡಾಲ್ : ಗಾಯತ್ರಿ (ಪ್ರಥಮ), ಗಂಗಾ (ದ್ವಿತೀಯ). 

ಹೂ ಕಟ್ಟುವುದು : ಕರುಣಾ (ಪ್ರಥಮ), ನಾಗವೇಣಿ (ದ್ವಿತೀಯ).

ಚಲನಚಿತ್ರಗಳ ಹೆಸರು : ಕೊಟ್ರೇಶ್ (ಪ್ರಥಮ), ನೌಶಿನ್ ತಾಜ್ (ದ್ವಿತೀಯ)

ಸೀರೆ ಉಡುವುದರಲ್ಲಿ : ಕಾಜಲ್ (ಪ್ರಥಮ), ವೀರಮ್ಮ (ದ್ವಿತೀಯ)

ಕುಂಟಪಿಲ್ಲೆ : ಪಲ್ಲವಿ (ಪ್ರಥಮ), ಲಕ್ಷ್ಮಿ (ದ್ವಿತೀಯ)

ಸ್ಕಿಪಿಂಗ್ : ಪೂರ್ಣಿಮ (ಪ್ರಥಮ), ಸುಮ ವಿಜಯ (ದ್ವಿತೀಯ).

ಬೀಸಕಲ್ಲು : ಗಿರಿಜಾ ಮಂಜಪ್ಪ (ಪ್ರಥಮ), ಮಂಗಳಮ್ಮ .

ಕವಡೆ : ಶಿವಬಸಮ್ಮ (ಪ್ರಥಮ), ಕುಸುಮ (ದ್ವಿತೀಯ) ಸ್ಥಾನ ಪಡೆದಿರುತ್ತಾರೆ.

error: Content is protected !!