ದಾವಣಗೆರೆ, ಜ.9 – ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಹಾಗೂ ಸುರಹೊನ್ನೆಯಲ್ಲಿ ನಡೆಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಅವರು ಕಡಲೆ ಶೇಕಡ 50 ರಷ್ಟು ಹೂ ಹಂತದಲ್ಲಿದ್ದಾಗ, ಪೋಷಕಾಂಶಗಳನ್ನು ಒದಗಿಸುವ ಚಿಕ್ಪೀ ಮ್ಯಾಜಿಕ್ (chickpea magic) ಅನ್ನು 5 ಗ್ರಾಂ ಪುಡಿ ಮತ್ತು ಅದರಲ್ಲಿ ಸಸ್ಯ ಪ್ರಚೋದಕ 0.5ml ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು. ಚಿಕ್ಪೀ ಮ್ಯಾಜಿಕ್ ಲಘು ಪೋಷಕಾಂಶ ಹಾಗೂ ಪ್ರಧಾನ ಪೋಷಕಾಂಶಗಳನ್ನು ಹೊಂದಿರುತ್ತದೆ. ಸಿಂಪರಣೆ ಮಾಡುವುದರಿಂದ ಇಳುವರಿ ಹೆಚ್ಚಿಸಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಆದಾಯ ಮಾಡಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ತಿಳಿಸಿದರು.
ಮಣ್ಣು ವಿಜ್ಞಾನಿ ಎಚ್.ಎಮ್. ಸಣ್ಣ ಗೌಡರ್ ಮಾತನಾಡಿ, ಕಾಯಿ ಕೊರಕದ ಬಾಧೆ ಹೆಚ್ಚಾದಲ್ಲಿ Emmactin benzoate 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡುವುದು ಸೂಕ್ತ ಎಂದು ತಿಳಿಸಿದರು