ಭಾರತದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪಾಲಿಸುವ ಪಕ್ಷ ಬಿಜೆಪಿ

ರಾಣೇಬೆನ್ನೂರಿನಲ್ಲಿನ ಬಿಜೆಪಿ ಪ್ರಕೋಷ್ಟಗಳ  ಸಭೆಯಲ್ಲಿ ಪ್ರಕೋಷ್ಟಗಳ ಸಂಯೋಜಕ ಡಾ. ಭಾನುಪ್ರಕಾಶ್

ರಾಣೇಬೆನ್ನೂರು,ಮಾ.27- ದೇಶ ಅಪಾಯದ ಪರಿಸ್ಥಿತಿ ಎದುರಿಸುತ್ತಿದ್ದಾಗ  ಜಯಪ್ರಕಾಶ ನಾರಾಯಣ ಅವರ ಆಣತಿಯಂತೆ ಜನತಾ ಪಕ್ಷ ಕಟ್ಟಲಾಯಿತು. ನಂತರ ಹುಟ್ಟಿಕೊಂಡ ಭಾರತೀಯ ಜನತಾ ಪಾರ್ಟಿ ನಾಲ್ಕು ದಶಕ ಕಳೆದರೂ ಹೋಳಾಗಿಲ್ಲ. ಹುಟ್ಟಿನಿಂದಲು ಒಗ್ಗಟ್ಡು ಕಾಯ್ದುಕೊಂಡಿದೆ ಎಂದು ಪ್ರಕೋಷ್ಟಗಳ ಸಂಯೋಜಕ ಡಾ. ಭಾನುಪ್ರಕಾಶ್ ಹೇಳಿದರು.

ಪೂರ್ವಿಕಾ ಮಹಲ್‌ನಲ್ಲಿ ನಡೆದ ಬಿಜೆಪಿ ಪ್ರಕೋಷ್ಟಗಳ ಸಭೆ ಉದ್ಘಾಟಿಸಿ  ಅವರು ಮಾತನಾಡುತ್ತಿದ್ದರು.

ಒಟ್ಟು ನಮ್ಮಲ್ಲಿ 24 ಪ್ರಕೋಷ್ಟಗಳಿವೆ, ಎಲ್ಲವುಗಳಿಗೂ ನಿರ್ದಿಷ್ಟ ಗುರಿಯಿದೆ. ಜನಪರ ಚಿಂತನೆಯ ಈ ಗುರಿಗಳ ಬಗ್ಗೆ ಸಾಮೂಹಿಕ  ಚರ್ಚೆ, ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಬಿಜೆಪಿ ಪಕ್ಷ ಅವುಗಳ ಜಾರಿಗೆ ಸಲಹೆ, ಸೂಚನೆಗಳನ್ನು ಕೊಡುತ್ತದೆ. ಸಂಸ್ಕೃತಿ, ವಿಚಾರಗಳಿಗೆ ಅಂಟಿಕೊಂಡ ಪಕ್ಷವಾಗಿದ್ದು, ಜನಪರ ಚಿಂತನೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಡಾ. ಭಾನುಪ್ರಕಾಶ್‌ ವಿವರಿಸಿದರು.

ಪ್ರತಿಯೊಬ್ಬ ಮಾನವನ ಮಾನ ರಕ್ಷಣೆಯ ಕಾರ್ಯ ನೇಕಾರನಿಂದ ಆಗುತ್ತದೆ. ಇಲ್ಲಿ ನೇಕಾರಿಕೆ ಉದ್ಯೋಗ
ಹೆಚ್ಚು ಇದೆ, ನೇಕಾರಿಕೆಗೆ ಬೇಕಾದ ಕಚ್ಚಾ ಮಾಲು ಹತ್ತಿಯನ್ನು ಬೆಳೆಯುವ ರೈತರೂ ಇದ್ದಾರೆ, ಈ ಈರ್ವರಿಗೂ ವಂದನೆಗಳನ್ನು ಸಲ್ಲಿಸಿದ ಭಾನುಪ್ರಕಾಶ್‌ ಜೊತೆಗೆ ಸಹ ಸಂಯೋಜಕ ಡಾ. ಎ. ಎಚ್. ಶಿವಯೋಗಿಸ್ವಾಮಿ, ಜಯತೀರ್ಥ ಕಟ್ಟಿ, ರಾಜ್ಯ ಸಂಚಾಲಕ ಡಾ.ಬಸವರಾಜ ಕೇಲಗಾರ, ಮಾಜಿ ನಗರಾಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ನಗರಸಭೆ ಸದಸ್ಯರಾದ ಪ್ರಭಾವತಿ ತಿಳವಳ್ಳಿ, ಮೈಲಪ್ಪ ಗೋಣಿಬಸಮ್ಮನವರ, ತಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮಾ ಕುರವತ್ತಿ ಪಾಲ್ಗೊಂಡಿದ್ದರು.

error: Content is protected !!