ಹರಿಹರ ನಗರಸಭೆ ಅಧ್ಯಕ್ಷರಾಗಿ ಷಾಹಿನಾಬಾನು

ಹರಿಹರ, ಮಾ. 25 – ನಗರ ಸಭೆಯ ಅಧ್ಯಕ್ಷ ರಾಗಿ ಷಾಹಿನಾ ಬಾನು ದಾದಾ ಪೀರ್ ಭಾನುವಳ್ಳಿ ಹಾಗೂ ಉಪಾಧ್ಯ ಕ್ಷರಾಗಿ ಎ. ವಾಮನಮೂರ್ತಿ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಉಪವಿಭಾಗಾಧಿ ಕಾರಿ ಮಮತಾ ಹೊಸಗೌಡ್ರು ತಿಳಿಸಿದ್ದಾರೆ.

ನಗರಸಭೆಯ ಅಧ್ಯಕ್ಷರಾಗಿದ್ದ ರತ್ನ ಡಿ. ಉಜ್ಜೇಶ್ ಮತ್ತು ಉಪಾಧ್ಯಕ್ಷ ರಾದ ಎಂ.ಎಸ್. ಬಾಬುಲಾಲ್ ಅವರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಪಡಿಸಲಾಗಿತ್ತು.

ನಗರಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಷಾಹಿನಾಬಾನು ದಾದಾಪೀರ್ ಭಾನುವಳ್ಳಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ.ಎಸ್. ಪಕ್ಷದ ಎ. ವಾಮನಮೂರ್ತಿ ವಕೀಲರು ನಾಮಪತ್ರವನ್ನು ಸಲ್ಲಿಸಿದರು. ಇವರಿಬ್ಬರೇ ಸಲ್ಲಿಸಿದ ನಾಮಪತ್ರಗಳನ್ನು ಪರಿಶೀಲಿಸಿ ಹೊಸಗೌಡರ್ ಅವರು ಅವಿರೋಧ ಆಯ್ಕೆ ಪ್ರಕಟಿಸಿದ್ದಾರೆ.

ಈ ವೇಳೆ ಮಾತನಾಡಿದ ಶಾಸಕ ಎಸ್. ರಾಮಪ್ಪ, ನಾವು ಮತ್ತು ಜೆ.ಡಿ.ಎಸ್. ಪಕ್ಷದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಆಡಳಿತದ ಒಪ್ಪಂದ ಮಾಡಿಕೊಂಡಿದ್ದೆವು. ನಾವು ಮುಂದಿನ 11 ತಿಂಗಳ ಕಾಲ ಅಧಿಕಾರ ಮಾಡುವುದಾಗಿ ಹೇಳಿದರು.

ಷಾಹಿನಾಬಾನು ದಾದಾಪೀರ್ ಅವರ ಆಡಳಿತದಲ್ಲಿ ಎಲ್ಲಾ ಪಕ್ಷದ ಸದಸ್ಯರ ಸಹಕಾರ ಪಡೆದುಕೊಂಡು, ನಗರದ ಅಭಿವೃದ್ಧಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಜೆ.ಡಿ.ಎಸ್. ಸದಸ್ಯರಾದ ದಾದಾಖಲಂದರ್ ಮತ್ತು ಆರ್.ಸಿ. ಜಾವೇದ್ ಮಾತನಾಡಿ, ನಮ್ಮ ಪಕ್ಷದ 15 ಸದಸ್ಯರು ಇದ್ದಾರೆ. ನಮಗೆ ಮೂವರು ಸದಸ್ಯರ ಬೆಂಬಲ ನೀಡುವುದಕ್ಕೆ ಸಿದ್ಧರಿದ್ದಾರೆ. ಆದರೂ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಿಂದೆ ಇದ್ದ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಸಹಕಾರ ನೀಡಿದಂತೆ ಇವರಿಗೂ ಸಹ ಎಲ್ಲಾ ರೀತಿಯ ಸಹಕಾರ ನೀಡಬೇಕು. ಇದೇ ತಿಂಗಳ ನಡೆಯುವ ಬಜೆಟ್ ಮಂಡನೆ ಸಮಯದಲ್ಲಿ ಎಲ್ಲಾ ಸದಸ್ಯರ ಮನವಿಗಳಿಗೆ ಹೆಚ್ಚು ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ, ಮಾರ್ಚ್ ಕೊನೆಯ ದಿನಾಂಕದೊಳಗೆ ನಗರಸಭೆಯ ಬಜೆಟ್ ಮಂಡನೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎ. ವಾಮನಮೂರ್ತಿ, ಮಾಜಿ ಅಧ್ಯಕ್ಷೆ ರತ್ನ ಡಿ.ಉಜ್ಜೇಶ್, ಸದಸ್ಯರಾದ ಪಕ್ಕೀರಮ್ಮ, ಉಷಾ ಮಂಜುನಾಥ್ , ಬಾಬುಲಾಲ್, ಪಿ. ಎನ್. ವೀರುಪಾಕ್ಷ, ಕೆ.ಜಿ. ಸಿದ್ದೇಶ್, ವಸಂತ್, ಕವಿತಾ ಮಾರುತಿ, ಹನುಮಂತಪ್ಪ, ಅಲ್ತಾಫ್, ಲಕ್ಷ್ಮೀ ಮೋಹನ್, ಸಾವಿತ್ರಮ್ಮ, ಅಬ್ದುಲ್ ಅಲಿಂ, ಷಾಹಿನಾಬಾನು, ಆರ್.ಸಿ. ಜಾವೇದ್, ದಾದಾ ಖಲಂದರ್, ನಾಗರತ್ನ, ಮುಜಾಮಿಲ್ ಬಿಲ್ಲು, ನಗರಸಭೆ ಎಇಇ ಬಿರಾದಾರ, ಆರ್. ಓ. ಮಂಜುನಾಥ್ , ಮನಸ್ಸೂರು ಮದ್ದಿ ಇತರರು ಹಾಜರಿದ್ದರು.

error: Content is protected !!