ನಂದಿಗುಡಿ : ನೂತನ `ಗುರು ನಿವಾಸ’ ಕಟ್ಟಲು ತೀರ್ಮಾನ

ಮಲೆಬೆನ್ನೂರು, ಮಾ.25- ನಂದಿಗುಡಿ ಬೃಹನ್ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಸರ್ಕಾರದಿಂದ ಬಿಡುಗಡೆ ಯಾಗಿರುವ 2 ಕೋಟಿ ರೂ. ವಿಶೇಷ ಅನುದಾನದಲ್ಲಿ `ಗುರು ನಿವಾಸ’ ಕಟ್ಟಲು ತೀರ್ಮಾನಿಸಲಾಯಿತು.

ಈ ಕುರಿತು ಚರ್ಚಿಸಲು ಶುಕ್ರವಾರ ನಂದಿಗುಡಿ ಮಠದಲ್ಲಿ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಕರೆದಿದ್ದ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ನಂದೀಶ್ವರ ಪ್ರೌಢಶಾಲೆ ಬಳಿ ಇರುವ ವಿಶಾಲ ಜಾಗದಲ್ಲಿ ಮಠದ ನೂತನ ಕಟ್ಟಡ ಕಟ್ಟಲು ಎಲ್ಲರೂ ಒಪ್ಪಿಗೆ ನೀಡಿದರು.

ಸರ್ಕಾರದ ಹಣದಲ್ಲೇ ಕಾಮಗಾರಿ ಮುಗಿ ಯುವುದಿಲ್ಲ, ಭಕ್ತರೂ ಸಹ ಕೈ ಜೋಡಿಸುವಂತೆ ಶ್ರೀಗಳು ಮಾಡಿದ ಮನವಿಗೆ ಸಭೆಯಲ್ಲಿದ್ದವರು ನೆರವಿನ ಭರವಸೆ ನೀಡಿದರು. ದಾವಣಗೆರೆಯ ಲ್ಲಿರುವ ನಂದಿಗುಡಿ ಮಠದ ಹಾಸ್ಟೆಲ್‌ ಜಾಗದಲ್ಲಿ ನೂತನ ಹಾಸ್ಟೆಲ್‌ ಕಟ್ಟಡ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸುವ ಯೋಜನೆ ಶೀಘ್ರ ಪ್ರಾರಂಭವಾಗಲಿದೆ ಎಂದು ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಭೆಗೆ ತಿಳಿಸಿದರು.

ನೊಳಂಬ ವೀರಶೈವ ಸಂಘದ ಕೇಂದ್ರ ಸಮಿತಿ ನಿರ್ದೇಶಕರಾದ ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ, ಸಿ.ಬಿ. ಈಶ್ವರಪ್ಪ, ಹಿರಿಯ ವೈದ್ಯರಾದ ಡಾ. ಸಾತೇನಹಳ್ಳಿ, ಡಾ. ಟಿ. ಬಸವರಾಜ್‌, ಮುಖಂಡರಾದ ಶಿಕಾರಿಪುರದ ಭೂಕಾಂತಪ್ಪ, ಮಹೇಂದ್ರ, ಗುರು, ಬ್ಯಾಡಗಿ ಪ್ರಭು, ಜಿಗಳಿಯ ಇಂದೂಧರ್‌, ಗೌಡ್ರ ಬಸವರಾಜಪ್ಪ, ಮಲೇಬೆ ನ್ನೂರಿನ ಎಂ. ಕರಿಬಸಯ್ಯ, ಬಿ.ವೀರಯ್ಯ, ವಾಸನದ ಬಸವ ರಾಜಪ್ಪ, ಹಳ್ಳಿಹಾಳ್‌ ಶಾಂತನ ಗೌಡ, ಪರಮೇಶ್ವರಪ್ಪ, ವೀರನಗೌಡ, ಜಿ. ಬೇವಿನಹಳ್ಳಿಯ ಬಂಡೇರ ತಿಮ್ಮಣ್ಣ, ಕೊಕ್ಕನೂರಿನ ಓ.ಬಿ. ನಿಂಗನಗೌಡ, ಕೆ.ಪಿ. ಆಂಜನೇಯ ಪಾಟೀಲ್‌, ಕೆ.ಬಿ. ರವಿ, ಅಭಿ, ಕೆ.ಎನ್‌.ಹಳ್ಳಿಯ ಕೆ.ಬಿ. ರವಿ ಉಪನ್ಯಾಸಕ ಡಾ. ರಾಕೇಶ್‌  ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!