ಹರಪನಹಳ್ಳಿ, ಮಾ.23- ಉತ್ತಮ ನಟನೆ ಜೊತೆ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಜನ ಸಾಮಾನ್ಯರಾಗಿ ಅಕಾಲಿಕ ಮರಣ ಹೊಂದಿದ ದಿ.ಪುನೀತ್ ರಾಜಕುಮಾರ್ (ಅಪ್ಪು) ರವರ ಹೆಸರನ್ನು ಪಟ್ಟಣದ ಸ್ಟೇಡಿಯಂ ಅಥವಾ ಪ್ರವಾಸಿ ಮಂದಿರ ವೃತ್ತಕ್ಕೆ ನಾಮ ಕರಣ ಮಾಡಲು ಪುರಸಭಾ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವಾನುಮ ತದಿಂದ ನಿರ್ಣಯ ಕೈಗೊಳ್ಳಲಾಯಿತು.
ಮೊದಲಿಗೆ ಪುರಸಭಾ ಅಧ್ಯಕ್ಷ ಮಂಜುನಾಥ್ ಇಜಂತಕರ್ ಮಕ್ಕಳ ಉಚಿತ ವಿದ್ಯಾಭ್ಯಾಸ ಸೇರಿದಂತೆ ಸಾಮಾ ಜಿಕ ಸೇವೆ ಹಾಗೂ ಉತ್ತಮ ನಟನಾಗಿ ಗುರುತಿಸಿಕೊಂಡ ಪುನೀತ್ ಅವರ ಸವಿನೆನಪಿಗಾಗಿ ಪಟ್ಟಣದಲ್ಲಿ ಕ್ರೀಡಾಂ ಗಣ, ವೃತ್ತಗಳಿಗೆ ಹೆಸರಿಡಲು ಸದಸ್ಯರು ಸೂಕ್ತ ಸಲಹೆ, ಸೂಚನೆ ನೀಡಬೇಕು ಎಂದು ವಿಷಯ ಮಂಡಿಸಿದರು.
ಎಂ.ವಿ.ಅಂಜಿನಪ್ಪ ಮಾತನಾಡಿ, ಪುನೀತ್ ಸಾಮಾಜಿಕ ಕಳಕಳಿ ಇಟ್ಟು ಕೊಂಡು, ಯುವಕರಿಗೆ ಸ್ಪೂರ್ತಿಯಾಗಿ ದ್ದರು, ಶಾಸಕರ ಗಮನಕ್ಕೆ ತಂದು ಸ್ಟೇಡಿಯಂಗೆ ಹೆಸರಿಟ್ಟು, ಅಭಿಮಾನಿಗಳ ಭಾವನೆಗಳಿಗೆ ಸ್ಪಂದಿಸೋಣ ಎಂದರು.
ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ, ನೈತಿಕತೆ ಬೆಳೆಸಿಕೊಂಡ ವ್ಯಕ್ತಿ ಪುನೀತ್, ಇಂದಿನ ಯುವ ಜನತೆ ಅವರ ವ್ಯಕ್ತಿತ್ವ ಅಳವಡಿಸಿ ಕೊಳ್ಳುವ ಸಲುವಾಗಿ ಶಾಸಕರ ಗಮನಕ್ಕೆ ತಂದು ವೃತ್ತ ಅಥವಾ ಕ್ರೀಡಾಂಗಣಕ್ಕೆ ನಾಮಕರಣ ಮಾಡೋಣ ಎಂದು ಹೇಳಿದರು.
ಕಿರಣ್ ಶಾನ್ಬಾಗ್, ಡಿ.ಅಬ್ದುಲ್ ರೆಹಮಾನ್, ಭರತೇಶ್, ರಾಘವೇಂದ್ರ ಶೆಟ್ಟಿ, ಗೊಂಗಡಿ ರಾಜು, ಜಾವೇದ್, ರುದ್ರಪ್ಪ, ವೆಂಕಟೇಶ್, ತಾರಾ ಹನುಮಂ ತಪ್ಪ, ತಾಲ್ಲೂಕು ಕ್ರೀಡಾಂಗಣಕ್ಕೆ ಪುನೀತ್ ಹೆಸರಿಡಲು ಸಲಹೆ ನೀಡಿದರು.
ಜಾಕೀರ್ ಹುಸೇನ್ ಕೊಟ್ಟೂರು – ಪ್ರವಾಸಿ ಮಂದಿರ ವೃತ್ತದ ಬೈಪಾಸ್ಗೆ ಸಲಹೆ ನೀಡಿದರೆ, ಲಾಟಿ ದಾದಾಪೀರ್ ಉದ್ಯಾನವನಕ್ಕೆ, ಹೀಗೆ ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ಗಳನ್ನು ಹಂಚಿಕೊಂಡರು.ಅಂತಿಮ ವಾಗಿ ಅಧ್ಯಕ್ಷ ಮಂಜುನಾಥ್ ಇಜಂತ ಕರ್ ಶೀಘ್ರದಲ್ಲಿಯೇ ಶಾಸಕರ ಗಮನಕ್ಕೆ ಈ ವಿಚಾರ ತಂದು, ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಒಟ್ಟಿನಲ್ಲಿ ಪುನೀತ್ ರಾಜಕುಮಾರ್ ರವರ ಹೆಸರನ್ನು ಕ್ರೀಡಾಂಗಣ ಅಥವಾ ಪ್ರವಾಸಿ ಮಂದಿರ ವೃತ್ತಕ್ಕೆ ನಾಮಕರಣ ಮಾಡಲು ಬಹುತೇಕ ಸದಸ್ಯರು ಒಲವು ವ್ಯಕ್ತ ಪಡಿಸಿದರು. ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ, ಸಣ್ಣ ಹಾಲಪ್ಪ ಹಾಜರಿದ್ದರು.