ಮಲೇಬೆನ್ನೂರು, ಜ.10- ಪ್ರಕೃತಿ ವಿಕೋಪ ಪರಿಹಾರ ನಿಧಿ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಭಾನುವಳ್ಳಿಯಿಂದ ನಂದಿಗುಡಿವರೆಗಿನ ರಸ್ತೆಯಲ್ಲಿ ಆಯ್ದ ಭಾಗಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಅವರು ನಿನ್ನೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಎಕ್ಕೆಗೊಂದಿ ಕ್ರಾಸ್ನಿಂದ ಭಾನುವಳ್ಳಿವರೆಗಿನ ರಸ್ತೆ ಕಾಮಗಾರಿಗೆ 13 ಕೋಟಿ ರೂ. ಅನುದಾನ ಬಿಡುಗಡೆಗೆ ಉಪಮುಖ್ಯಮಂತ್ರಿಗಳೂ ಆದ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದ್ದು, ಆಡಳಿತಾತ್ಮಕ ಅನುಮೋದನೆ ಸಿಕ್ಕ ನಂತರ ಕಾಮಗಾರಿ ಆರಂಭಿಸಲಾಗುವುದೆಂದು ಶಾಸಕ ರಾಮಪ್ಪ ತಿಳಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಕೆ. ಕನ್ನಪ್ಪ, ನಿವೃತ್ತ ಶಿಕ್ಷಕ ಟಿ. ಪುಟ್ಟಪ್ಪ, ನಿವೃತ್ತ ಅಧಿಕಾರಿ ಜಿ. ಚಂದ್ರಪ್ಪ, ಯು.ಕೆ. ಅಣ್ಣಪ್ಪ, ಗ್ರಾ.ಪಂ. ನೂತನ ಸದಸ್ಯರುಗಳು, ಪಿಡಬ್ಲ್ಯೂಡಿ ಇಂಜಿನಿಯರ್ ಈ ವೇಳೆ ಹಾಜರಿದ್ದರು.