ಪ್ರಗತಿ ಪಥದಲ್ಲಿ ಸನ್ಮತಿ ಸೌಹಾರ್ದ ಸಹಕಾರಿ

ಸಂಘದ ಅಧ್ಯಕ್ಷ ಟಿ.ಎಂ. ಪಾಲಾಕ್ಷ ಹರ್ಷ

ದಾವಣಗೆರೆ, ಜ. 8- ಪ್ರಗತಿ ಪಥದಲ್ಲಿರುವ ನಗರದ ಕೆಲವೇ ಸಹಕಾರಿ ಸಂಘಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ಸನ್ಮತಿ ಸೌಹಾರ್ದ ಸಹಕಾರಿ ನಿಯಮಿತ ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಟಿ.ಎಂ. ಪಾಲಾಕ್ಷ ಹರ್ಷ ವ್ಯಕ್ತಪಡಿಸಿದರು.

ಸಂಘದ ಕಚೇರಿಯಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಸಂಸ್ಥೆಯ 3ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲ್ಪಾವಧಿಯಲ್ಲೇ ಪ್ರಗತಿಯ ಮುಂಚೂಣಿಯಲ್ಲಿ ಮುಂದುವರೆದಿ ರುವ ತಮ್ಮ ಸಂಘವು 2020 ಮಾರ್ಚ್ ಅಂತ್ಯಕ್ಕೆ 6.17 ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಪ್ರಸಕ್ತ ಸಾಲಿನಲ್ಲಿ ಶೇ. 5ರಂತೆ ಲಾಭಾಂಶ ನೀಡಲು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಪಾಲಾಕ್ಷ ಅವರು ಸದಸ್ಯರ ಹರ್ಷೋದ್ಘಾರದ ನಡುವೆ ಘೋಷಿಸಿದರು.

ಸಹಕಾರಿಯ ಸದಸ್ಯರು, ಗ್ರಾಹಕರ ಪ್ರೀತಿ-ನಂಬಿಕೆ-ವಿಶ್ವಾಸ, ಸಿಬ್ಬಂದಿ ವರ್ಗ – ಪಿಗ್ಮಿ ಸಂಗ್ರಹಕಾರರ ಪರಿಶ್ರಮ, ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಇಚ್ಛಾಶಕ್ತಿಯಿಂದಾಗಿ ತಮ್ಮ ಸಂಘವು ಪ್ರಗತಿಯಲ್ಲಿದೆ ಎಂದು ತಿಳಿಸಿದ ಪಾಲಾಕ್ಷ ಅವರು, ಇದಕ್ಕೆ ಕಾರಣರಾದ ಎಲ್ಲರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

ನಿರ್ದೇಶಕ ಸಿ. ನರಸಿಂಹ ಮೂರ್ತಿ ಅವರು ನೂತನ ಸಾಲಿನ ಆಯ-ವ್ಯಯ ಮಂಡಿಸಿದರು. ನಿರ್ದೇಶಕ ಸಿ.ಜಿ. ವೀರೇಶ್ ಕಳೆದ ಸಾಲಿನ ಲಾಭದ ವಿಂಗಡಣೆಯನ್ನು ಸಭೆಗೆ ವಿವರಿಸಿದರು.

ಸಂಘದ ನಿರ್ದೇಶಕರುಗಳಾದ ಎನ್. ಹೆಚ್. ಪ್ರಕಾಶ್ ಚಾರಿ, ಶ್ರೀಮತಿ ಉಷಾ ಸತೀಶ್, ಎಸ್.ಬಿ. ಚನ್ನಳ್ಳಿ, ಪ್ರಸಾದ್ ವಿ. ರಾಯ್ಕರ್,  ಶ್ರೀಮತಿ ರಾಜೇಶ್ವರಿ ಮುರುಗೇಶ್, ಇಮ್ರಾನ್ ಖಾನ್, ನ್ಯಾಮತಿ ವಾಮ ದೇವ್ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯ ದರ್ಶಿ ಮೊಹಮ್ಮದ್ ಒಬೇದುಲ್ಲಾ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಕು. ನೇಸರ ತಂಡದವರಿಂದ ಪ್ರಾರ್ಥನೆಯ ನಂತರ ಸಂಘದ ಉಪಾಧ್ಯಕ್ಷ ವಿ.ಹೆಚ್. ಕುಮಾರ್ ಸ್ವಾಗತಿಸಿದರು. ನಿರ್ದೇಶಕ ಎಂ.ಎನ್. ಹರೀಶ್ ವಂದಿಸಿದರು.

error: Content is protected !!