ಹರಿಹರ ತಾಲ್ಲೂಕು ಹಳ್ಳಿಹಾಳ್ ಗ್ರಾಮದ ಹಿರಿಯರೂ, ಶ್ರೀ ನಂದಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರೂ ಆದ ಶ್ರೀ ಊರಮುಂದ್ಲರ ಹೆಚ್. ಮಹಾದೇವಪ್ಪಗೌಡ್ರು ಅವರು ದಿನಾಂಕ 07.01.2021ರ ಗುರುವಾರ ತಡರಾತ್ರಿ 12.30 ಕ್ಕೆ ನಿಧನರಾದರು. ಮೃತರಿಗೆ 88 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಓರ್ವ ಪುತ್ರಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 08.01.2021ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಹಳ್ಳಿಹಾಳ್ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
April 13, 2025