ಕಂದನಕೋವಿ ಶಾಲೆಗೆ ಕೊಠಡಿ ಮಂಜೂರು

ಶಾಸಕ‌ ಲಿಂಗಣ್ಣ ಭರವಸೆ

ದಾವಣಗೆರೆ, ಮಾ.16- ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಶಾಸಕ ಪ್ರೊ. ಲಿಂಗಣ್ಣ ಅಭಿಪ್ರಾಯಪಟ್ಟರು. 

ಮಾಯಕೊಂಡ ಸಮೀಪದ ಕಂದನಕೋವಿ ಸರ್ಕಾರಿ ‌ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಿಸಿಯೂಟ, ಹಾಲು, ಸಮವಸ್ತ್ರ, ಪಠ್ಯಪುಸ್ತಕ ನೀಡಿ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರತಿ ಹಳ್ಳಿಯಲ್ಲೂ ಶೌಚಾಲಯ, ಶಾಲಾ ಕೊಠಡಿ ನಿರ್ಮಾಣಕ್ಕೆ ಸಾಕಷ್ಟು ಅನುದಾನ‌ ನೀಡಲಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತಂದು ಸರ್ವರಿಗೂ ಉಚಿತ ಶಿಕ್ಷಣ  ನೀಡಲಾಗುತ್ತಿದೆ. ಪೋಷಕರು ಅನಗತ್ಯ ಖಾಸಗಿ ಶಾಲೆ ಗೀಳಿನಿಂದ ಹೊರಬಂದು ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಬೇಕು ಎಂದರು. 

ಜಿ.ಪಂ. ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ  ಉತ್ತಮ ತರಬೇತಿ ಹೊಂದಿದ ನುರಿತ ಶಿಕ್ಷಕರಿದ್ದಾರೆ ಹಾಗೂ ಇಂಗ್ಲಿಷ್ ಮಾಧ್ಯಮ ಸೌಲಭ್ಯವಿದೆ. ಕೆಲ ಶಿಕ್ಷಕರು  ಸ್ವ-ಇಚ್ಛೆಯಿಂದ ವಿಶೇಷ ತರಗತಿ ನಡೆಸುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಅವರ ಮನವಿಯಂತೆ ಶಾಲೆಗೆ ಅಗತ್ಯವಿರುವಷ್ಟು ಡೆಸ್ಕ್ ದೇಣಿಗೆ ನೀಡುವುದಾಗಿ ಘೋಷಿಸಿದರು.

ದೊಡ್ಡಾಲಘಟ್ಟ ಸರ್ಕಾರಿ ಶಾಲಾ ಶಿಕ್ಷಕ ಶಿವಕುಮಾರ್, ಚಿತ್ರಕಲಾ‌ ಶಿಕ್ಷಕ ವೀರೇಶ್ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ, ಉಪಾಧ್ಯಕ್ಷ ರವಿ ಮತ್ತು ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿ ಬಾಯಿ,  ಸದಸ್ಯರಾದ ಭಾರತಮ್ಮ, ಶಿವಗಂಗಮ್ಮ, ಕರಿಬಸಪ್ಪ ಮುಖಂಡರಾದ ದ್ಯಾಮನಗೌಡ, ಪರುಸಪ್ಪ, ಮುಖ್ಯ ಶಿಕ್ಷಕಿ ರಾಜೇಶ್ವರಿ ಮತ್ತಿತರರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!