ಅಖಂಡ ಕರ್ನಾಟಕ ರೈತ ಸಂಘದ ನಿಯೋಗದಿಂದ ಶೀಘ್ರ ಸಿಎಂ ಭೇಟಿ

ಹೊನ್ನಾಳಿ,ಮಾ.16-  ಮಾರ್ಚ್ ತಿಂಗಳ ಒಳಗಾಗಿ ರಾಜ್ಯ ರೈತ ಸಂಘವು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಭೇಟಿ ಮಾಡಿ ರಾಜ್ಯದ ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಚರ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸುವುದಾಗಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹಾವೇರಿ ಸಿದ್ಧನಗೌಡ ಪಾಟೀಲ್ ತಿಳಿಸಿದ್ದಾರೆ.

ಮಂದಿರದಲ್ಲಿ 7 ಜಿಲ್ಲೆಗಳ ರೈತ ಪ್ರಮುಖ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಎದುರಿಸುತ್ತಿರುವ ಅತಿಮುಖ್ಯ ಸಮಸ್ಯೆಗಳಾದ ನಮ್ಮ ಹೊಲ – ನಮ್ಮ ರಸ್ತೆ, ರೈತನಿಗೆ ಬಗರ್‌ಹುಕ್ಕುಂ ಸಾಗುವಳಿ ಪತ್ರ ನೀಡುವ, ತಾಲ್ಲೂಕುಗಳ ಕೆರೆ ಅಭಿವೃದ್ಧಿ, ರೈತರ ಜಮೀನಿನ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಕೆ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವ, ಇನ್ನಿತರೆ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳನ್ನು  ಭೇಟಿ ಮಾಡಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೇರಹಳ್ಳಿ ನಾಗರಾಜಪ್ಪ ಮಾತನಾಡಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಚಿತ್ರದುರ್ಗದ ಸೋಮನಗುದ್ದು ರಂಗಸ್ವಾಮಿ, ರಾಜ್ಯ ಪ್ರ.ಕಾ ಮಂಡ್ಯ ಸುಧೀರ್ ಕುಮಾರ್, ರಾಜ್ಯ ಸಂ. ಕಾರ್ಯದರ್ಶಿ ಹಡಗಲಿ ಎಂ. ಗಂಗಾಧರ್, ನಂದಿ ತಾವರೆ ಎಂ. ಮುರುಗೇಂದ್ರಯ್ಯ, ರಾಜ್ಯ ಕಾರ್ಯದರ್ಶಿ ವಿಜಯಪುರ ಅರವಿಂದ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ಧಾರವಾಡ ಯಡಿ ಒಡೆಯರ್, ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಅರಬಗಟ್ಟೆ ಕೆ., ಸಿ ಬಸಪ್ಪ, ಹಿರೇಮಠ ಬಸಣ್ಣ, ಸುಂಕದಕಟ್ಟೆ ಕರಿಬಸಪ್ಪ, ಹೊಳೆಹರಳಹಳ್ಳಿ ಬಸವರಾಜಪ್ಪ ಹಾಗೂ ಇನ್ನಿತರೆ ರೈತ ಮುಖಂಡರು ಇದ್ದರು.

error: Content is protected !!