ಮನಸ್ಸಿನ ಹಿಡಿತಕ್ಕೆ ಯೋಗ, ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು

ಹರಪನಹಳ್ಳಿ ತಾ||ನ ಕಾರ್ಯಕ್ರಮದಲ್ಲಿ ಪಂಚಮಸಾಲಿ ಶ್ರೀ

ಹರಪನಹಳ್ಳಿ, ಜ.5- ದೇಹ ವೃಕ್ಷವಾದರೆ, ಮನಸ್ಸು ಮಂಗನಿದ್ದಂತೆ.ಮನಸ್ಸನ್ನು ಕೇಂದ್ರೀಕರಿಸಲು ದೇಹಕ್ಕೆ ಸರಿಯಾಗಿ ನೀರು, ಆಹಾರ ಪೂರೈಸಬೇಕು. ಆಗ ಮಾತ್ರ ಮನಸ್ಸು ಹಿಡಿತದಲ್ಲಿರುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಾನಹಳ್ಳಿ, ಕೂಲಹಳ್ಳಿ, ಬಾಗಳಿ, ಕೋಡಿಹಳ್ಳಿ, ನಂದಿಬೇವೂರು, ಕೊಂಗನಹೊಸೂರು, ಬಾವಿಹಳ್ಳಿ, ಗಜಾಪುರ ಹಾಗೂ ಚಿಗಟೇರಿ ಗ್ರಾಮಗಳಿಗೆ ತೆರಳಿ ಗ್ರಾಮದರ್ಶನ ಕೈಗೊಂಡು ಭಕ್ತರನ್ನು ಇದೇ ದಿನಾಂಕ 14-15ರಂದು ನಡೆಯುವ ಹರಜಾತ್ರೆಗೆ ಆಹ್ವಾನಿಸಿ, ನಂತರ ಪಟ್ಟಣದ ಪರ್ಲ್ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಡಿದ ಶ್ರೀಗಳು, ಮನುಷ್ಯ ನಿತ್ಯ ತನ್ನ ಬದುಕಿನ ಜತೆಗೆ ಉತ್ತಮ ಆರೋಗ್ಯ ಹೊಂದಲು ಯೋಗ ಮತ್ತು ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ಹೊಸ ಚೈತನ್ಯ, ಉತ್ಸಾಹ ಮೂಡುತ್ತದೆ ಎಂದರು. ನಮ್ಮ ಪರಿಸರ ಆರೋಗ್ಯಕರ ವಾತಾವರಣವನ್ನುಂಟು ಮಾಡಬೇಕು. ಇದಕ್ಕಾಗಿ ಸ್ವಚ್ಚತೆ, ಗಿಡ, ಮರಗಳನ್ನು ಬೆಳೆಸಿದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು. ಪರ್ಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಶಶಿಧರ್ ಪೂಜಾರ್, ಸದಸ್ಯರುಗಳಾದ ಕೆ. ವಿರೂಪಾಕ್ಷ, ಪಿ. ಮಂಜುನಾಥ, ಉಲ್ಲತ್ತಿ ಬಸವರಾಜ, ಮಾಲತೇಶ ಚಳಗೇರಿ, ಚನ್ನೇಶ ಬಣಕಾರ್, ಪ್ರಾಂಶುಪಾಲರಾದ ಸುಮಾ ನಾಗೇಶ ಉಪ್ಪಿನ. ನಾಗೇಶ ಉಪ್ಪಿನ  ಇನ್ನಿತರರಿದ್ದರು.

error: Content is protected !!