ಸಮಯ ಪಾಲನೆ, ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು

ಮಲೇಬೆನ್ನೂರು, ಜ. 4- ಮುಪ್ಪಿನ ವಯಸ್ಸಲ್ಲಿ ಮೆಚ್ಚುಗೆಯ ಮಾತುಗಳನ್ನು ಕೇಳಿದಾಗ 39 ವರ್ಷಗಳ ಸೇವಾ ನಿಷ್ಠೆ ಬಗ್ಗೆ ಆನಂದ, ತೃಪ್ತಿ ತರುತ್ತದೆ ಎಂದು ಮುಖ್ಯ ಶಿಕ್ಷಕಿ ಎನ್.ಎಸ್.ಗೌರಮ್ಮ ಅಭಿಪ್ರಾಯಪಟ್ಟರು.

ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಹೃದಯಸ್ಪರ್ಶಿ ಸನ್ಮಾನ  ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳ ಮತ್ತು ಪೋಷಕರ ಮನ ದಲ್ಲಿ ಉಳಿಯಬೇಕು. ಸಮಾಜದಲ್ಲಿನ ಗೌರವ ಮತ್ತು ವ್ಯರ್ಥ ಸಮಯ ಬಳಸಿಕೊಂಡು ಮಕ್ಕ ಳಿಗೆ ಕಲಿಕೆ ನೀಡಬೇಕು ಎಂದು ತಿಳಿಸಿದರು.

ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಚಂದ್ರಪ್ಪ ಮಾತನಾಡಿ, ಉಪಾಧ್ಯಾ ಯರು ವಯೋನಿವೃತ್ತಿ ಪಡೆಯುವ ದಿನವೇ ಅವರ ಶಾಲೆಗೆ ತೆರಳಿ ಸಂಘದಿಂದ ಗೌರವಿಸುವ ಹೊಸ ಆಲೋಚನೆ ಮಾಡಲಾಗಿದೆ ಎಂದರು.

ಶಿಕ್ಷಕ ಮಲ್ಲಿಕಾರ್ಜುನ್ ಅಂಗಡಿ ಮಾತ ನಾಡಿ, ವ್ಯಕ್ತಿಯ ವ್ಯಕ್ತಿತ್ವ, ನಡತೆ, ಚಟುವಟಿಕೆ ಗಳನ್ನು ಅನುಸರಿಸಿ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸಕಾಲ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಅವರು ವಯೋನಿವೃತ್ತಿ ಹೊಂದಿದ  ಗೌರಮ್ಮ ಅವರನ್ನು ಸನ್ಮಾನಿಸಿ, ಗೌರವಿಸಿದರು. ಶಿ.ಸಂಘದ ಪ್ರಧಾನ ಕಾರ್ಯದರ್ಶಿ ಶರಣ ಕುಮಾರ್ ಹೆಗಡೆ, ಉಪಾಧ್ಯಕ್ಷೆ ಜ್ಯೋತಿ, ಖಜಾಂಚಿ ವಿನೋದ, ಮುದ್ದೇರ ಹನುಮಂ ತಪ್ಪ, ಮಹೇಶ್ವರಯ್ಯ, ತಿಪ್ಪೇಸ್ವಾಮಿ, ಖಲೀಲ್, ಬೀರಪ್ಪ, ನಾಗರಾಜ್, ಕರಿಬಸಪ್ಪ, ಪತ್ರಕರ್ತ ಸದಾನಂದ, ರುದ್ರಪ್ಪ, ಸುಧಾ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಹೆಚ್.  ಶರಣ್ ಮತ್ತು  ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!