ದಾವಣಗೆರೆ, ಜ.2- ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ನಗರ ಉಪವಿಭಾಗದ ಉತ್ತರ ವೃತ್ತದಲ್ಲಿನ ಅಪರಾಧ ತಡೆ ಮಾಸಾಚರಣೆ ಜಾಥಾಗೆ ಇಂದು ಚಾಲನೆ ನೀಡಲಾಯಿತು.
ನಗರದ ಉತ್ತರ ಸಂಚಾರಿ ಪೊಲೀಸ್ ಠಾಣೆ ಬಳಿ ಎಎಸ್ಪಿ ಎಂ. ರಾಜೀವ್ ಚಾಲನೆ ನೀಡಿದರು.
ಸೈಬರ್ ಕ್ರೈಂ ಗಳ ಬಗ್ಗೆ ಮಾಹಿತಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಸಿಪಿಐಗಳಾದ ಗಜೇಂದ್ರಪ್ಪ, ಗಿರೀಶ್, ಪಿಎಸ್ ಐಗಳಾದ ಕೃಷ್ಣಪ್ಪ, ಸತೀಶ್ ಬಾಬು, ಲಲಿತಮ್ಮ, ಶೈಲಜಾ, ಇಮ್ರಾನ್, ಕಿರಣ್ ಕುಮಾರ್, ಜಯಶೀಲಾ, ಅನ್ನಪೂರ್ಣ, ಉತ್ತರ ವೃತ್ತದ ಪೊಲೀಸ್ ಠಾಣೆ ಸಿಬ್ಬಂದಿಗಳು ಜಾಥಾ ಮುಖೇನ ಅಪರಾಧಗಳು ನಡೆಯಲು ಅವಕಾಶ ನೀಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸಿದರು.