ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಯುವ ವಿಭಾಗದ ಅಧ್ಯಕ್ಷ ಮಹಂತೇಶ್ ಎಂ.ಪಾಟೀಲ
ದಾವಣಗೆರೆ, ಜ.3- ರಾಜ್ಯದ ಪ್ರತಿ ತಾಲ್ಲೂಕು ಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಗಳನ್ನು ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡ ಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಯುವ ವಿಭಾಗದ ಅಧ್ಯಕ್ಷ ಮಹಂತೇಶ್ ಎಂ.ಪಾಟೀಲ ಅವರು ತಿಳಿಸಿದರು.
ನಗರದ ಶ್ರೀಶೈಲ ಮಠದಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಾಲ್ಲೂಕುಗಳಲ್ಲಿ ವೀರಶೈವ ಭವನಗಳ ನಿರ್ಮಾಣಕ್ಕೆ ಸರ್ಕಾರ ಮತ್ತು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಮುಂದಾಗಬೇಕೆಂದು ಹೇಳಿದರು.
ರಾಜಕೀಯ ಪಕ್ಷಗಳು ವೀರಶೈವ – ಲಿಂಗಾ ಯತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ವೀರಶೈವ – ಲಿಂಗಾಯತ ಯುವಕರಿಗೆ ರಾಜಕೀಯವಾಗಿ ಸ್ಥಾನಮಾನ ನೀಡಬೇಕು, ಹೆಚ್ಚಿನ ಉದ್ಯೋಗ ಅವಕಾಶ ಒದಗಿಸಬೇಕು. ವೀರಶೈವ-ಲಿಂಗಾಯತ ಯುವಕರನ್ನು ಸಂಘಟಿಸಲು ಯುವ ವಿಭಾಗ ಮುಂದಾಗಿದೆ ಎಂದು ವಿವರಿಸಿದರು.
ವೀರಶೈವ – ಲಿಂಗಾಯತ ಸಮುದಾಯವು ಕೇಂದ್ರ ಸರ್ಕಾರವು ಓ.ಬಿ.ಸಿ ಗೆ ಸೇರಿಸಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅ.ಭಾ.ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಅಣಬೇರು, ಪ್ರಧಾನ ಕಾರ್ಯದರ್ಶಿ ನಿಖಿಲ್ ಕೊಂಡಜ್ಜಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್.ಟಿ.ಪ್ರಶಾಂತ್, ಉಪಾಧ್ಯಕ್ಷರಾದ ಕೊಂಡಜ್ಜಿ ಶಿವಕುಮಾರ್, ಶಂಕರ್ ಗೌಡ ಬಿರಾದಾರ್, ಪದಾಧಿಕಾರಿಗಳಾದ ಶಂಭು ಉರೇಕೊಂಡಿ, ವೀರೇಶ್ ಮುಧೋಳ್, ಕೆ.ಎನ್.ಅಶೋಕ್ ಗೋಪನಾಳ್, ಸಿದ್ದಲಿಂಗೇಶ್ ಮತ್ತಿತರರಿದ್ದರು.