ದಾವಣಗೆರೆ, ಮಾ.13- ಪಾಲಿಕೆ ವ್ಯಾಪ್ತಿಗೆ ಒಳಪಡುವ ಸಿದ್ದವೀರಪ್ಪ ಬಡಾವಣೆಯ 10ನೇ ಕ್ರಾಸ್ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಡಾಂಬರ್ ಬದಲಿಗೆ ಸಿಸಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಮಾಡುವಂತೆ ಅಲ್ಲಿನ ನಾಗರಿಕರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.
ಸಿದ್ದವೀರಪ್ಪ ಬಡಾವಣೆಯ 10 ನೇ ಕ್ರಾಸ್‍ನಲ್ಲಿ ಜನದಟ್ಟಣೆ ಹೆಚ್ಚಿದ್ದು, ಅಲ್ಲಿ ಪಾಲಿಕೆಯಿಂದ ಟಾರ್ ರಸ್ತೆ ಮಾಡಲು ಹೊರಟಿದ್ದಾರೆ. ಇದರಿಂದ ಒಂದೆರಡು ತಿಂಗಳಲ್ಲೇ ಅದು ಕಿತ್ತು ಹೋಗುವುದರಿಂದ ಜನರಿಗೆ ಹಾಗೂ ವಾಹನ ಸವಾರರಿಗೆ ಮತ್ತೆ ತೊಂದರೆ ಉಂಟಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈಗಾಗಲೇ ಚೆನ್ನಾಗಿರುವ ಟಾರ್ ರಸ್ತೆಯನ್ನು ಪೂರ್ತಿ ಅಗೆದು ಮೇಲ್ಬಾಗಕ್ಕೆ ಸಣ್ಣ ಪ್ರಮಾಣದ ತೆಳುವಾದ ಟಾರ್ ಹಾಕುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ. ಸಿಸಿ ರಸ್ತೆ ಹಾಗೂ ಯೋಗ್ಯ ಒಳಚರಂಡಿ ನಿರ್ಮಾಣ ಮಾಡಬೇಕೆಂದು ಅಲ್ಲಿನ ನಿವಾಸಿಗಳಾದ ಸಂಗಮೇಶ್ವರ, ಗೌರಮ್ಮ, ಆರ್.ವಿ. ಚೈತ್ರ, ಹೆಚ್.ಆರ್. ಗೀತಾ, ರಾಧಾಬಾಯಿ, ಲಕ್ಷ್ಮಣ್ ಮತ್ತಿತರರು ಪಾಲಿಕೆಗೆ ಮನವಿ ಮಾಡಿದ್ದಾರೆ.